ವಿಪಕ್ಷ ನಾಯಕನಾಗಿರಲಿ ಅಥವಾ ಬ್ರಿಗೇಡ್ ಕೆಲಸ ಮಾಡಲಿ : ಈಶ್ವರಪ್ಪಗೆ ಯಡಿಯೂರಪ್ಪ ಟಾಂಗ್
Update: 2017-04-27 12:13 IST
ಬೆಂಗಳೂರು, ಎ.27: ಕಳೆದ ಚುನಾವಣೆಯಲ್ಲಿ ನಾಲ್ಕನೆ ಸ್ಥಾನ ಪಡೆದಿರುವ ಈಶ್ವರಪ್ಪ ಅವರು ಒಂದೋ ವಿಪಕ್ಷ ನಾಯಕನಾಗಿ ಮುಂದುವರಿಯಲಿ ಅಥವಾ ರಾಯಣ್ಣ ಬ್ರಿಗೇಡ್‌ನಲ್ಲಿ ಕೆಲಸ ಮಾಡಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಟಾಂಗ್ ನೀಡಿದ್ದಾರೆ.
"ಇವತ್ತಿನ ಪಕ್ಷ ವಿರೋಧಿ ಚಟುವಟಿಕೆಗೆ ರಾಷ್ಟ್ರೀಯ ನಾಯಕ ಸಂತೋಷ್ ಕಾರಣ. ನಮ್ಮ ಕಚೇರಿಯಲ್ಲಿ ಪಕ್ಷ ವಿರೋಧಿ ಕೆಲಸಕ್ಕೆ ರೂಪುರೇಷೆ ನಡೆಸಲಾಗುತ್ತಿದೆ. ಸಂತೋಷ್‌ಗೆ ಭಾನುಪ್ರಕಾಶ್ ಹಾಗೂ ನಿರ್ಮಲ್‌ಕುಮಾರ್ ಸುರಾನ ಬಲಗೈ ಬಂಟರಾಗಿದ್ದಾರೆ'' ಎಂದು ಯಡಿಯೂರಪ್ಪ ಹೇಳಿದ್ದಾರೆ.
ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಎಚ್ಚರಿಕೆಯ ಹೊರತಾಗಿಯೂ ಈಶ್ವರಪ್ಪ ಅಧ್ಯಕ್ಷತೆಯಲ್ಲಿ ನಗರದ ಅರಮನೆ ಮೈದಾನದಲ್ಲಿ ಬಿಜೆಪಿ ಭಿನ್ನಮತರ ಸಭೆ ಆರಂಭವಾಗಿದೆ. ಅಮಿತ್ ಶಾ ನಮಗೆ ಸಭೆ ನಡೆಸದಂತೆ ಸೂಚಿಸಿಲ್ಲ. ಯಡಿಯೂರಪ್ಪ ಸುಳ್ಳು ಹೇಳುತ್ತಿದ್ದಾರೆ. ಶಾ ಸೂಚನೆ ನೀಡುತ್ತಿದ್ದರೆ ನನ್ನೊಂದಿಗೆ ನೇರ ಮಾತುಕತೆ ನಡೆಸುತ್ತಿದ್ದರು ಎಂದು ಈಶ್ವರಪ್ಪ ಹೇಳಿದ್ದಾರೆ.