×
Ad

ಸಿಎಂ ಸಿದ್ದರಾಮಯ್ಯ-ವ್ಯಾಟಿಕನ್ ರಾಯಭಾರಿ ಜಿಯಾಮ್ ಬಾಟ್ಟಿಸ್ಟ ಬೇಟಿ

Update: 2017-05-02 15:31 IST

ಬೆಂಗಳೂರು, ಮೇ 2: ಕ್ರೈಸ್ತ ಧರ್ಮಗುರು ಹಾಗೂ ವ್ಯಾಟಿಕನ್ ರಾಯಭಾರಿಗಳಾದ ಜಿಯಾಮ್ ಬಾಟ್ಟಿಸ್ಟ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಇಂದು ಭೇಟಿಯಾದರು.

ಈ ಸಂದರ್ಭ ಮುಖ್ಯಮಂತ್ರಿ ಸಿದ್ದರಾಮಯ್ಯ ಧರ್ಮಗುರುಗಳನ್ನು ಶಾಲು ಹೊದಿಸಿ ಗೌರವಿಸಿದರು.  ಜಿಯಾಮ್ ಬಾಟ್ಟಿಸ್ಟ ಅವರು ಮುಖ್ಯಮಂತ್ರಿಗೆ ಬೈಬಲ ನ್ನು ಕಾಣಿಕೆಯಾಗಿ ನೀಡಿದರು. ಜಿಯಾಮ್ ಬಾಟ್ಟಿಸ್ಟ ಇದೇ ಮೊದಲ ಬಾರಿಗೆ ಭಾರತಕ್ಕೆ ಬಂದಿದ್ದಾರೆ.

ಈ ಸಂದರ್ಭದಲ್ಲಿ ಆರ್ಚ್ ಬಿಷಪ್ ಬರ್ನಾಡ್, ಸಚಿವ ಕೆ.ಜೆ. ಜಾರ್ಜ್‌ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News