ಶಾಕಿಂಗ್ ನ್ಯೂಸ್: ದೇಶದ ಕಪ್ಪುಹಣ ಪ್ರಮಾಣ ತಿಳಿದರೆ ದಂಗಾಗುತ್ತೀರಿ

Update: 2017-05-03 03:27 GMT

ಹೊಸದಿಲ್ಲಿ, ಮೇ 3: ದೇಶದಿಂದ 2014ರಲ್ಲಿ 21 ಶತಕೋಟಿ ಡಾಲರ್ ಮೌಲ್ಯದ ಕಪ್ಪುಹಣವನ್ನು ಅಕ್ರಮವಾಗಿ ಹೊರಕ್ಕೆ ಸಾಗಿಸಲಾಗಿದೆ ಎಂದು ಗ್ಲೋಬಲ್ ಫೈನಾನ್ಶಿಯಲ್ ಇಂಟಿಗ್ರಿಟಿ ಸಂಸ್ಥೆ ಸೋಮವಾರ ಬಿಡುಗಡೆ ಮಾಡಿದ ವರದಿಯಲ್ಲಿ ಬಹಿರಂಗವಾಗಿದೆ. ಈ ಅಕ್ರಮ ಹೊರಹರಿವು ಹಿಂದಿನ ವರ್ಷಕ್ಕಿಂತ ಶೇಕಡ 19ರಷ್ಟು ಹೆಚ್ಚಾಗಿದೆ ಎಂದು ವರದಿ ವಿವರಿಸಿದೆ.

ಅಂತೆಯೇ ದೇಶಕ್ಕೆ ಅಕ್ರಮ ಕಪ್ಪುಹಣದ ಒಳಹರಿವನ್ನು ಕೂಡಾ ವರದಿಯಲ್ಲಿ ವಿವರಿಸಲಾಗಿದ್ದು, 101 ಶತಕೋಟಿ ಡಾಲರ್ ಹಣ 2014ರಲ್ಲಿ ಭಾರತಕ್ಕೆ ಹರಿದಿದೆ. ಇದು ಹಿಂದಿನ ವರ್ಷಕ್ಕಿಂತ ಶೇಕಡ 11ರಷ್ಟು ಅಧಿಕ. ಇದು ಕೂಡಾ ಆತಂಕಕಾರಿ ಬೆಳವಣಿಗೆ ಎಂದು ವಿವರಿಸಲಾಗಿದೆ.

ವಿಶ್ವಾದ್ಯಂತ 620 ಶತಕೋಟಿಯಿಂದ 970 ಶತಕೋಟಿ ಡಾಲರ್‌ವರೆಗಿನ ಸಂಪತ್ತು ಅಭಿವೃದ್ಧಿಶೀಲ ದೇಶಗಳಿಂದ ಹೊರಕ್ಕೆ ಹರಿದಿವೆ. ಮೂಲಭೂತವಾಗಿ ವ್ಯಾಪಾರಿ ವಂಚನೆ ಮೂಲಕ ಈ ದಂಧೆ ನಡೆಯುತ್ತಿದೆ. ಅಂತೆಯೇ ಅಕ್ರಮ ಒಳಹರಿವು ಪ್ರಮಾಣ ಸುಮಾರು 1.4ರಿಂದ 2.5 ದಶಸಹಸ್ರ ಕೋಟಿ ಡಾಲರ್ ಆಗಿದೆ. 2005-2014ರ ಅವಧಿಯಲ್ಲಿ ಅಭಿವೃದ್ಧಿಶೀಲ ದೇಶಗಳು ನಡೆಸಿದ ಒಟ್ಟು ವಹಿವಾಟಿನ ಶೇ.14ರಿಂದ 24ರಷ್ಟು ಅಕ್ರಮ ಒಳಹರಿವು ಹಾಗೂ ಹೊರಹರಿವು ಉಂಟಾಗಿದೆ ಎಂದು ವರದಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News