ವಿಪ್ರೊ ಐಟಿ ಸಂಸ್ಥೆಗೆ ಬೆದರಿಕೆ ಇಮೇಲ್
Update: 2017-05-06 15:38 IST
ಬೆಂಗಳೂರು, ಮೇ 6: ರಾಜ್ಯದ ಪ್ರತಿಷ್ಠಿತ ಐಟಿ ಸಂಸ್ಥೆ ಸರ್ಜಾಪುರದ ವಿಪ್ರೊಗೆ ಅನಾಮಧೇಯ ಬೆದರಿಕೆ ಇ ಮೇಲ್ ಬಂದಿರುವುದಾಗಿ ಪೊಲೀಸ್ ದೂರು ನೀಡಲಾಗಿದೆ.
rms2pooalcm ಎಂಬ ಇ ಮೇಲ್ ಐಡಿಯಿಂದ ಬಂದಿರುವ ಬೆದರಿಕೆ ಪತ್ರದಲ್ಲಿ 50 ಕೋ.ರೂ. ಬಿಟ್ ಕಾಯಿನ್ ಮೂಲಕ ಮೇ 25ರೊಳಗೆ ನೀಡುವಂತೆ ತಾಕೀತು ಮಾಡಲಾಗಿದೆ. ಇಲ್ಲವಾದಲ್ಲಿ ಸಂಸ್ಥೆಗೆ ಡ್ರೋನ್ ಸಹಾಯದಿಂದ ವಿಷಯುಕ್ತ ರಾಸಾನಿಯಕ ದಾಳಿ ನಡೆಸುವುದಾಗಿ ಬೆದರಿಕೆ ಹಾಕಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಬಗ್ಗೆ ಸೈಬರ್ ಕ್ರೈಂ ಮತ್ತು ಸಿಸಿಬಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ರವಿ ತಿಳಿಸಿದ್ದಾರೆ.