ಮಹಡಿಯಿಂದ ಬಿದ್ದು ವೃದ್ಧೆ ಸಾವು
Update: 2017-05-07 18:44 IST
ಬೆಂಗಳೂರು, ಮೇ 7: ಮಹಡಿ ಮೇಲಿದ್ದ ಬಟ್ಟೆ ತರಲು ಹೋಗಿದ್ದ ವೃದ್ಧೆಯೊಬ್ಬರು ಆಯತಪ್ಪಿ ನಾಲ್ಕನೆ ಮಹಡಿಯಿಂದ ಕೆಳಗೆ ಬಿದ್ದು ಸಾವನ್ನಪ್ಪಿರುವ ಘಟನೆ ಇಲ್ಲಿನ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಅನ್ನಪೂರ್ಣೇಶ್ವರಿನಗರದ 9ನೆ ಕ್ರಾಸ್‌ನ ಅಂಜಲಿ ರೆಸಿಡೆನ್ಸಿ ಅಪಾರ್ಟ್‌ಮೆಂಟ್‌ನ 4ನೆ ಮಹಡಿಯಲ್ಲಿ ವಾಸಿಸುತ್ತಿದ್ದ ವೆಂಕಟಲಕ್ಷ್ಮಮ್ಮ(70) ಮೃತಪಟ್ಟಿರುವ ವೃದ್ಧೆ ಎಂದು ಪೊಲೀಸರು ಗುರುತಿಸಿದ್ದಾರೆ.
ಮನೆಯ ಹೊರಗೆ ಒಣ ಹಾಕಿದ್ದ ಬಟ್ಟೆ ತರಲು ಹೋಗಿದ್ದ ಅವರು ಅಲ್ಲಿಂದ ಆಯತಪ್ಪಿ ಕೆಳಗೆಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಅನ್ನಪೂರ್ಣೇಶ್ವರಿನಗರ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.