×
Ad

ದ್ವಿತೀಯ ಪಿಯು ಪರೀಕ್ಷೆ ಫಲಿತಾಂಶ ಪ್ರಕಟ: ಉಡುಪಿ ಪ್ರಥಮ, ದಕ್ಷಿಣ ಕನ್ನಡ ದ್ವಿತೀಯ

Update: 2017-05-11 15:11 IST

ಬೆಂಗಳೂರು, ಮೇ 11: 2016-17ನೆ ಸಾಲಿನಲ್ಲಿ ರಾಜ್ಯಾದ್ಯಂತ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶವನ್ನು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್ ಇಂದು ಪ್ರಕಟಿಸಿದ್ದಾರೆ.

ಉಡುಪಿ ಜಿಲ್ಲೆ ಪ್ರಥಮ, ದ.ಕ. ಜಿಲ್ಲೆ ದ್ವಿತೀಯ ಹಾಗೂ ಉ.ಕನ್ನಡ ಜಿಲ್ಲೆ ತೃತೀಯ ಸ್ಥಾನ ಗಳಿಸಿದ್ದು, ಬೀದರ್ ಕೊನೆಯ ಸ್ಥಾನ ಪಡೆದಿದೆ. ಪ್ರಸಕ್ತ ಸಾಲಿನಲ್ಲಿ ಮಾ.9ರಿಂದ 27ರ ತನಕ 988 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆದಿದ್ದು, 6.84 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು.

ಒಟ್ಟಾರೆ 52.38 ಫಲಿತಾಂಶ ದಾಖಲಿಸಲಾಗಿದ್ದು, ಕಳೆದ ಬಾರಿಯ 57.20 ಫಲಿತಾಂಶಕ್ಕೆ ಹೋಲಿಸಿದರೆ ಶೇ.5ರಷ್ಟು ಫಲಿತಾಂಶ ಕಡಿಮೆಯಾಗಿದೆ. ವಿಜ್ಞಾನ ವಿಭಾಗದಲ್ಲಿ 71 ಶೇ., ವಾಣಿಜ್ಯ ವಿಭಾಗದಲ್ಲಿ 1,48,269 ವಿದ್ಯಾರ್ಥಿಗಳು ಉತ್ತೀರ್ಣರಾಗಿ 60.09 ಹಾಗೂ ಕಲಾ ವಿಭಾಗದಲ್ಲಿ 75,166 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇ.35.05 ಫಲಿತಾಂಶ ದಾಖಲಾಗಿದೆ. 132 ಕಾಲೇಜುಗಳು ಶೂನ್ಯ ಫಲಿತಾಂಶ ದಾಖಲಿಸಿದೆ. ಮೇ 28ರಂದು ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಜೂನ್ 28ರಿಂದ ಜು.8ರವರೆಗೆ ಪೂರಕ ಪರೀಕ್ಷೆಗಳು ನಡೆಯಲಿವೆ. ಉತ್ತರ ಪತ್ರಿಕೆಯ ನಕಲು ಪಡೆಯಲು ಮೇ 19 ಕೊನೆಯ ದಿನವಾಗಿದೆ. 

ಬಾಲಕಿಯರದ್ದೇ ಮೇಲುಗೈ: ಈ ವರ್ಷವೂ ಕೂಡ ಪಿಯು ಪರೀಕ್ಷೆಯಲ್ಲಿ ಬಾಲಕಿಯರೇ ಮೇಲುಗೈ ಸಾಧಿಸಿದ್ದು, ಶೇ. 60.28 ಫಲಿತಾಂಶ ದಾಖಲಿಸಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷದ ಫಲಿತಾಂಶದಲ್ಲಿ ಶೇ.5ರಷ್ಟು ಕುಸಿತ ಕಂಡಿದ್ದು, ಬಾಲಕರು 44.74 ಶೇ. ಫಲಿತಾಂಶ ದಾಖಲಿಸಿದ್ದಾರೆ. 50.22 ಶೇ.ದಷ್ಟು ಗ್ರಾಮಾಂತರ ಪ್ರದೇಶದ ಹಾಗೂ ನಗರ ಪ್ರದೇಶದ 52.88 ಶೇ. ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 

ಟಾಪರ್ ಗಳ ಹೆಸರುಗಳನ್ನು ಪ್ರಕಟಿಸುವುದಿಲ್ಲ: ಟಾಪರ್ ಗಳ ಹೆಸರುಗಳನ್ನು ಬಳಸಿಕೊಂಡು ಕಾಲೇಜುಗಳ ದಂಧೆ ನಡೆಸುತ್ತವೆ ಎಂದಿರುವ ಸಚಿವ ತನ್ವೀರ್ ಸೇಠ್ ಈ ಬಾರಿ ಟಾಪರ್ ಗಳ ಹೆಸರುಗಳನ್ನು ಪ್ರಕಟಿಸುವುದಿಲ್ಲ ಎಂದಿದ್ದಾರೆ. ವಿಜ್ಞಾನ ವಿಭಾಗದಲ್ಲಿ 596, ವಾಣಿಜ್ಯ ವಿಭಾಗದಲ್ಲಿ 595 ಹಾಗೂ ಕಲಾ ವಿಭಾಗದಲ್ಲಿ 589 ಟಾಪ್ ಸ್ಕೋರ್ ಎನ್ನಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News