ಈಶ್ವರಪ್ಪರ ಆಪ್ತ ಸಹಾಯಕನ ಅಪಹರಣಕ್ಕೆ ಯತ್ನ
Update: 2017-05-11 18:48 IST
ಬೆಂಗಳೂರು, ಮೇ 11: ಬಿಜೆಪಿ ಮುಖಂಡ ಕೆ.ಎಸ್. ಈಶ್ವರಪ್ಪರ ಆಪ್ತ ಸಹಾಯಕನನ್ನು ಅಪಹರಿಸಲು ಯತ್ನಿಸಿದ ಘಟನೆ ನಡೆದಿದೆ.
ಕಾರಿನಲ್ಲಿ ಬಂದಿದ್ದ ನಾಲ್ವರು ದುಷ್ಕರ್ಮಿಗಳು ಈಶ್ವರಪ್ಪರ ಪಿಎ ವಿನಯ್ ಎಂಬವರನ್ನ ಅಪಹರಿಸಲು ಯತ್ನಿಸಿದ್ದಾರೆ. ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಅಪಹರಣಕಾರರಿಂದ ವಿನಯ್ ತಪ್ಪಿಸಿಕೊಂಡಿದ್ದಾರೆ. ಈ ಸಂದರ್ಭ ಈ ವೇಳೆ ಬಲಗೈ ಮುರಿತಕ್ಕೊಳಗಾಗಿದೆ. ಮೂಳೆ ಮುರಿತಕ್ಕೊಳಗಾದ ವಿನಯ್ ರನ್ನು ಹೆಬ್ಬಾಳ ದ ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.