×
Ad

ಬಿಜೆಪಿಯ 'ಮಿಷನ್ 150' ಆಸೆ ನುಚ್ಚುನೂರು: ಸಿದ್ದರಾಮಯ್ಯ

Update: 2017-05-12 15:04 IST

ಬೆಂಗಳೂರು, ಮೇ 12: ಬಿಜೆಪಿಯ 'ಮಿಷನ್ 150' ಆಸೆ ನುಚ್ಚುನೂರಾಗಿದೆ. ಲೋಕಸಭೆ ಚುನಾವಣೆ ಹೊರತುಪಡಿಸಿ ಬೇರೆಲ್ಲಾ ಚುನಾವಣೆ ನಾವು ಗೆದ್ದಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ವಿಧಾನಸಭೆಯಲ್ಲಿ ಇಂದು ಮಾತನಾಡುತ್ತಿದ್ದ ಅವರು, ನಾವು ಉಪಚುನಾವಣೆಯಲ್ಲಿ ಯಾರನ್ನೂ ಟೀಕೆ ಮಾಡಲಿಲ್ಲ. ನಮ್ಮ ಕೆಲಸ ಮುಂದಿಟ್ಟುಕೊಂಡೇ ಚುನಾವಣೆ ಎದುರಿಸಿದೆವು. ಎರಡೂ ಸ್ಥಾನಗಳನ್ನ ಗೆದ್ದೆವು ಎಂದರು.

ಶಿಕ್ಷಣ ಇಲಾಖೆಯಲ್ಲಿ ಹೆಚ್ಚಿನ ಹಣ ಖರ್ಚು ಮಾಡಿದ್ದು ನಾವು. ಐದು ವರ್ಷದಲ್ಲಿ ಬಿಜೆಪಿ ಖರ್ಚು ಮಾಡಿದ್ದು 55 ಸಾವಿರ ಕೋಟಿ ರೂ. ನಾವು ಖರ್ಚು ಮಾಡಿದ್ದು 99 ಸಾವಿರ ಕೋಟಿ ರೂ. ನೀರಾವರಿಗೆ ಅವರು ಖರ್ಚು ಮಾಡಿದ್ದು 25 ಸಾವಿರ ಕೋಟಿ ರೂ. ನಾವು ಖರ್ಚು ಮಾಡಿದ್ದು 62,570 ಕೋಟಿ ರೂ. ಕೃಷಿಗೆ ಅವರು ಖರ್ಚು ಮಾಡಿದ್ದು 17,182 ಕೋಟಿ ರೂ., ನಾವು ಖರ್ಚು ಮಾಡುತ್ತಿರುವುದು 44,655 ಕೋಟಿ ರೂ. ಗ್ರಾಮೀಣಾಭಿವೃದ್ಧಿಗೆ ಬಿಜೆಪಿ ಸರಕಾರ ಖರ್ಚು ಮಾಡಿದ್ದು 5,220 ಕೋಟಿ ರೂ. ನಾವು ಖರ್ಚು ಮಾಡಿದ್ದು 52,280 ಕೋಟಿ ರೂ. ವಸತಿಗೆ ಬಿಜೆಪಿ ಖರ್ಚು ಮಾಡಿದ್ದು 5157 ಕೋಟಿ ರೂ., ನಮ್ಮ ಸರ್ಕಾರ 17,237 ಕೋಟಿ ರೂ. ಖರ್ಚು ಮಾಡಿದೆ. ಎಸ್ ಸಿ ಎಸ್ ಟಿ ಅಭಿವೃದ್ಧಿಗೆ ಬಿಜೆಪಿ ಸರಕಾರ ಖರ್ಚು ಮಾಡಿದ್ದು 6200 ಕೋಟಿ ರೂ. ನಮ್ಮ ಅವಧಿಯಲ್ಲಿ ಮಾಡಿರುವುದು 16,000 ಕೋಟಿ ರೂ.ಎಂದು ಸಿಎಂ ಅಂಕಿಅಂಶಗಳ ಸಹಿತ ವಿವರಿಸಿದರು.     

# ಯಡಿಯೂರಪ್ಪರ ಮೇಲಿನ ಚಾರ್ಜ್ ಶೀಟ್ ಗಳ ಸಂಖ್ಯೆ ಎಷ್ಟು?              

ಯಡಿಯೂರಪ್ಪ ನಮ್ಮ ಸರಕಾರದ ಮೇಲೆ ಚಾರ್ಜ್ ಶೀಟ್ ಬಿಡುಗಡೆ ಮಾಡುತ್ತಾರೆ. ಮೊದಲು ಅವರ ಮೇಲೆ ಎಷ್ಟು ಚಾರ್ಜ್ ಶೀಟ್ ಹಾಕಿದ್ದಾರೆ ಅಂತ ಹೇಳಲಿ ಎಂದ ಮುಖ್ಯಮಂತ್ರಿ ಸವಾಲು ಹಾಕಿದರು.

 ಹೈ ಕೋರ್ಟ್ - ಸುಪ್ರೀಂ ಕೋರ್ಟ್, ಲೋಕಾಯುಕ್ತದಲ್ಲಿ ಯಡಿಯೂರಪ್ಪ ಮೇಲೆ ಕೇಸ್ ಇದೆ. ಜೈಲಿಗೆ ಹೋಗಿ ಬಂದವರು ನಮ್ಮ ಮೇಲೆ ಚಾರ್ಜ್ ಶೀಟ್ ಬಿಡುಗಡೆ ಮಾಡುತ್ತಾರೆ. ಗಾಜಿನ ಮನೆಯಲ್ಲಿ ಕುಳಿತು ಅವರು ಕಲ್ಲು ಹೊಡೆಯುತ್ತಾರೆ. ಬಿಜೆಪಿಯವರ ಜನರು ಕೇಳೋದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News