ನಟಿಯರ ಫೋಟೊ ಬಳಸಿ ವಿಕೃತಿ: ನಟಿ ಶೃತಿ ಹರಿಹರನ್ ದೂರು
Update: 2017-05-12 21:28 IST
ಬೆಂಗಳೂರು, ಮೇ 12: ಸಾಮಾಜಿಕ ಜಾಲತಾಣಗಳಲ್ಲಿ ಸಿನೆಮಾ ನಟಿಯರ ಫೋಟೊಗಳನ್ನು ಬಳಸಿ ವಿಕೃತಿಗೈಯ್ಯುತ್ತಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ನಟಿ ಶೃತಿ ಹರಿಹರನ್ ಇಲ್ಲಿನ ಪೊಲೀಸರಿಗೆ ದೂರು ನೀಡಿ, ಒತ್ತಾಯಿಸಿದ್ದಾರೆ.
ಮಹಿಳೆಯರ ಅಶ್ಲೀಲ ಫೋಟೊಗಳಿಗೆ ಚಿತ್ರ ನಟಿಯರ ಫೋಟೊಗಳನ್ನು ಅಂಟಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿರುವ ಕಿಡಿಗೇಡಿಗಳ ವಿರುದ್ಧ ನಗರದ ಪೊಲೀಸ್ ಆಯುಕ್ತರ ಕಚೇರಿಯಲ್ಲಿರುವ ಸೈಬರ್‌ಕ್ರೈಂ ಠಾಣೆಗೆ ದೂರು ಸಲ್ಲಿಸಿದರು.
ಅಶ್ಲೀಲ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕುತ್ತಿರುವ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಶೃತಿ ಹರಿಹರನ್ ಮನವಿ ಮಾಡಿದ್ದಾರೆ.