ಬೆಂಗಳೂರು: ಗೃಹಿಣಿಯ ರೇಪ್ ಆ್ಯಂಡ್ ಮರ್ಡರ್
Update: 2017-05-16 13:19 IST
ಆನೇಕಲ್, ಮೇ 16: ನೇಪಾಳ ಮೂಲದ ಗೃಹಿಣಿಯೊಬ್ಬಳನ್ನು ಅತ್ಯಾಚಾರ ಎಸಗಿ ಕೊಲೆಗೈದಿರುವ ಘಟನೆಯೊಂದು ತಾಲೂಕಿನ ಸರ್ಜಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ಸೊಂಪುರ ಗೇಟ್ ಬಳಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.
ನೇಪಾಳ ಮೂಲದ ಪವಿತ್ರಾ(20) ಮೃತಪಟ್ಟ ಗೃಹಿಣಿ. ನೇಪಾಳ ಮೂಲದ ತಿಲಕ್(26) ಕೊಲೆ ಆರೋಪಿಯಾಗಿದ್ದು, ಆತ ತಲೆಮರೆಸಿಕೊಂಡಿದ್ದಾನೆ.
ಈ ಕೃತ್ಯವು ಮೇ 4ರಂದು ನಡೆದಿದೆ. ಸೊಂಪುರ ಗೇಟ್ ಬಳಿಯ ಟ್ರಿನಿಟಿ ಅಪಾರ್ಟ್‌ಮೆಂಟ್‌ನಲ್ಲಿ ಆರೋಪಿಯು ಪವಿತ್ರಾರ ಮೇಲೆ ಅತ್ಯಾಚಾರ ಎಸಗಿ ಕೊಲೆಗೈದಿದ್ದಾನೆ. ಬಳಿಕ ಮೃತದೇಹವನ್ನು ಮನೆಯ ಪಕ್ಕದಲ್ಲೆ ಹುತ್ತಿಟ್ಟು ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ನಡುವೆ ಪವಿತ್ರಾ ಅವರ ಪತಿ ಕರುಣ್ ಪತ್ನಿ ನಾಪತ್ತೆಯಾಗಿರುವ ಬಗ್ಗೆ ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ತನಿಖೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.