×
Ad

​ಪಾಲಿಕೆ ಅಧಿಕಾರಿಗಳ ವಿರುದ್ಧ ದೂರು

Update: 2017-05-17 19:41 IST

ಬೆಂಗಳೂರು, ಮೇ 17: ಜಮೀನಿಗೆ ಕಾನೂನು ಬಾಹಿರವಾಗಿ ಎ ಖಾತಾ ಮಾಡಿ ಕೊಟ್ಟಿರುವ ರಾಜರಾಜೇಶ್ವರಿ ನಗರ ವಲಯ ಉಪ ಆಯುಕ್ತ ಸರ್ವರ್ ಮರ್ಚೆಂಟ್ ಹಾಗೂ ಎಆರ್‌ಒ ಜಯಮ್ಮ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ನಗರದ ಹೆಮ್ಮಿಗೆಪುರ ವಾರ್ಡ್‌ನ ವಾಜರಹಳ್ಳಿ ಗ್ರಾಮದ ಸರ್ವೆ ನಂ1/2 ಜಾಗದ 28 ಸಾವಿರ ಚದರ ಅಡಿಗಳಷ್ಟು ವಿಸ್ತೀರ್ಣದ ರೆವಿನ್ಯೂ ಸ್ವತ್ತಿಗೆ ಕಾನೂನು ಬಾಹಿರವಾಗಿ ಎ ಖಾತಾ ಮಾಡಿಕೊಟ್ಟಿದ್ದಾರೆ ಎಂದು ಆರೋಪಿಸಿ ಅಧಿಕಾರಿಗಳಿಬ್ಬರ ವಿರುದ್ಧ ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಎನ್.ಆರ್.ರಮೇಶ್ ಬಿಎಂಟಿಎಫ್ ಪೊಲೀಸರಿಗೆ ದೂರು ನೀಡಿದ್ದಾರೆ.

ಅಧಿಕಾರಿಗಳಿಬ್ಬರು ಖಾಸಗಿ ಸಂಸ್ಥೆಯೊಂದಕ್ಕೆ 28 ಸಾವಿರ ಚದರ ಅಡಿಗಳಷ್ಟು ಭೂಮಿಗೆ ಖಾತೆ ಮಾಡಿಕೊಟ್ಟಿದ್ದಾರೆ. ಅದು ಅಲ್ಲದೆ, ಹಿರಿಯ ಅಧಿಕಾರಿಗಳ ಗಮನಕ್ಕೆ ಬಾರದೆ ತಾವೇ ಎಲ್ಲ ಹಂತದ ಅನುಮೋದನೆಗಳನ್ನು ನೀಡಿ ಅಧಿಕಾರ ದುರುಪಯೋಗಪಡಿಸಿಕೊಂಡು ಬಿಬಿಎಂಪಿಗೆ ಲಕ್ಷಾಂತರ ರೂ.ಗಳ ವಂಚನೆ ಮಾಡಿದ್ದಾರೆಂದು ರಮೇಶ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News