×
Ad

ಮೇ 23: ರಾಷ್ಟ್ರಮಟ್ಟದ ಕೃಷಿ ಅರಣ್ಯ ಕಾರ್ಯಾಗಾರ

Update: 2017-05-22 18:20 IST

ಬೆಂಗಳೂರು, ಮೇ 22: ರಾಷ್ಟ್ರಮಟ್ಟದ ಕೃಷಿ ಅರಣ್ಯ ಕಾರ್ಯಾಗಾರವನ್ನು ಮೇ 23ರಂದು ನಗರದ ಜಿಕೆವಿಕೆ ಆವರಣದಲ್ಲಿನ ಬಾಬು ರಾಜೇಂದ್ರಪ್ರಸಾದ್ ರಾಷ್ಟ್ರೀಯ ಸಮಾವೇಶ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.

ಈ ಕಾರ್ಯಾಗಾರದಲ್ಲಿ ದೇಶದ ನಾನಾ ಭಾಗಗಳಿಂದ ಎಂಭತ್ತು ವಿಜ್ಞಾನಿಗಳು ಪಾಲ್ಗೊಳ್ಳಲಿದ್ದಾರೆ.

ದೇಶದ್ಯಾಂತ ಕೈಗೊಂಡಿರುವ ಕೃಷಿ ಅರಣ್ಯ ಸಂಶೋಧನೆ ಹಾಗೂ ತಂತ್ರಜ್ಞಾನಗಳ ವರ್ಗಾವಣೆ ಮತ್ತು ರೈತರ ಜಮೀನಿನ ಅಭಿವೃದ್ಧಿ ಬಗ್ಗೆ ಕೈಗೊಂಡಿರುವ ಯೋಜನೆಗಳ ಬಗ್ಗೆ ಕಾರ್ಯಾಗಾರದಲ್ಲಿ ಚರ್ಚಿಸಲಿದ್ದಾರೆ. ಕಾರ್ಯಾಗಾರದಲ್ಲಿ ಜಾಗತಿಕ ಕೃಷಿ ಅರಣ್ಯ ಯೋಜನೆ ದಕ್ಷಿಣ ಪ್ರಾಂತ್ಯ ನಿರ್ದೇಶಕ ಡಾ.ಜಾವೇದ್ ರಿಜ್ವಿ, ಭಾರತ ಅನುಸಂಧಾನ ಪರಿಷತ್ತಿನ ಸಹಾಯಕ ಮಹಾ ನಿರ್ದೇಶಕ ಡಾ.ಎಸ್.ಭಾಸ್ಕರ್, ಕೇಂದ್ರೀಯ ಕೃಷಿ ಅರಣ್ಯ ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ಓ.ಪಿ.ಚತುರ್ವೇದಿ, ಕೃಷಿ ವಿವಿಯ ಕುಲಪತಿ ಡಾ.ಎಚ್.ಶಿವಣ್ಣ ಸೇರಿದಂತೆ ಇತರರು ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News