ಹೌದು, ತಿಂಡಿಯನ್ನು ಹೊಟೇಲ್‌ನಿಂದ ತರಿಸಲಾಗಿತ್ತು: ಸುರೇಶ್‌ಕುಮಾರ್

Update: 2017-05-22 14:31 GMT

 ಬೆಂಗಳೂರು, ಮೇ 22: ಆತಿಥ್ಯ ನೀಡಿದ್ದ ದಲಿತರ ಮನೆಗೆ ಹೇಳಿದ್ದಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಯಡಿಯೂರಪ್ಪ ಮತ್ತವರ ಬೆಂಬಲಿಗರು ಬಂದಿದ್ದರಿಂದ ತಿಂಡಿ ಸಾಲದ ಕಾರಣ ಹೊಟೇಲ್‌ನಿಂದ ತರಿಸಲಾಗಿತ್ತು ಎಂದು ಬಿಜೆಪಿ ವಕ್ತಾರ ಸುರೇಶ್ ಕುಮಾರ್ ಒಪ್ಪಿಕೊಂಡಿದ್ದಾರೆ.

 ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ನಾವು ದಲಿತರಿಗೆ ಮಾನಸಿಕವಾಗಿ ಶಕ್ತಿ ತುಂಬುವ ಕೆಲಸ ಮಾಡಿದ್ದೇವೆ. ಆದರೆ ವಿರೋಧ ಪಕ್ಷದವರು ನಾವು ಉಪಾಹಾರ ಸೇವಿಸಿದ ವಿಚಾರವನ್ನು ರಾಜಕಾರಣ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ತುಮಕೂರಿನಲ್ಲಿ ದಲಿತರ ಮನೆಯಲ್ಲಿ ತಿಂಡಿ ತಯಾರಿಸಲಾಗಿತ್ತು. ಆದರೆ ಹೇಳಿದ್ದಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಯಡಿಯೂರಪ್ಪಮತ್ತವರ ಬೆಂಬಲಿಗರು ಬಂದಿದ್ದರಿಂದ ತಿಂಡಿ ಸಾಲದ ಕಾರಣ ಹೊಟೇಲ್‌ನಿಂದ ತಂದಿದ್ದು ನಿಜ. ಆದರೆ ಯಡಿಯೂರಪ್ಪ ದಲಿತರ ಮನೆಯಲ್ಲಿ ಆಹಾರ ಸೇವಿಸಿದ್ದಾರೆ ಎಂದು ಆ ಮನೆಯವರೇ ಒಪ್ಪಿಕೊಂಡಿದ್ದಾರೆ. ಆದರೆ ವಿರೋಧ ಪಕ್ಷಗಳು ಈ ವಿಚಾರವನ್ನು ಈಗ ರಾಜಕೀಯಕ್ಕೆ ಬಳಸಿಕೊಳ್ಳುತ್ತಿವೆ ಎಂದು ಗಂಭೀರವಾಗಿ ಆರೋಪಿಸಿದರು.

  ಕಾಂಗ್ರೆಸ್ ದಲಿತರನ್ನು ಕೇವಲ ಮತ ಬ್ಯಾಂಕ್a ಆಗಿ ಬಳಸಿಕೊಂಡಿದೆ. ನಾವು ದಲಿತರಿಗೆ ಮಾನಸಿಕವಾಗಿ ಶಕ್ತಿ ತುಂಬುವ ಕೆಲಸ ಮಾಡಿದ್ದೇವೆ. ಹೀಗಾಗಿಯೆ ದಲಿತರ ಮನೆಗೆ ಹೋಗಿ ಉಪಾಹಾರ ಸೇವಿಸಿದ್ದೇವೆ. ಇದನ್ನು ಅರಿಯದ ವಿರೋಧ ಪಕ್ಷದವರು ಇದನ್ನ್ನು ರಾಜಕಾರಣ ಮಾಡಿ ದಲಿತರನ್ನ ಅವಮಾನಿಸುತ್ತಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News