ಕೊಕೇನ್ ಮಾರಾಟ: ವಿದೇಶಿ ಪ್ರಜೆ ಸೆರೆ

Update: 2017-05-31 12:45 GMT

ಬೆಂಗಳೂರು, ಮೇ 31: ಕೊಕೇನ್ ಮಾರಾಟ ದಂಧೆಯಲ್ಲಿ ತೊಡಗಿದ್ದ ಆರೋಪದ ಮೇಲೆ ವಿದೇಶಿ ಪ್ರಜೆಯನ್ನು ಬಂಧಿಸಿರುವ ಸಿಸಿಬಿ ಪೊಲೀಸರು, ಆರು ಲಕ್ಷ ರೂ. ವೌಲ್ಯದ ಮಾದಕ ವಸ್ತು ವಶಕ್ಕೆ ಪಡೆದಿದ್ದಾರೆ.

ನೈಜಿರಿಯಾ ದೇಶದ ಮೈಕಲ್ ಇಯಾಮು (35) ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.

ನಗರದ ಕೊತ್ತನೂರಿನ ಬಿಳಿಶಿವಾಲೆ ಬಳಿ ಬಾಡಿಗೆ ಮನೆ ಮಾಡಿಕೊಂಡು ವಾಸಿಸುತ್ತಿದ್ದ ಆರೋಪಿಯು ಕೊಕೇನ್‌ನನ್ನು ಬೇರೆಡೆಯಿಂದ ತರಿಸಿಕೊಂಡು ನಗರದ ವಿಧೆಡೆ ಕಾರಿನಲ್ಲಿ ಸಂಚರಿಸಿ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದು ದಾಳಿ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಈತನಿಂದ 6 ಲಕ್ಷ ಮೌಲ್ಯದ 20 ಗ್ರಾಂ ಕೊಕೇನ್, 14 ಮೊಬೈಲ್‌ಗಳು, ಎರಡು ಪಾಸ್‌ಪೋರ್ಟ್, ಒಂದು ಕಾರು, 3 ಹಾರ್ಡ್‌ಡಿಸ್ಕ್, ಒಂದು ಐ-ಪಾಡ್ ವಶಪಡಿಸಿಕೊಂಡು ಇಲ್ಲಿನ ಕೊತ್ತನೂರು ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಿ ತನಿಖೆ ಮುಂದುವರೆಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News