×
Ad

‘ನೇತ್ರದಾನ’ ಸಾವಿನಲ್ಲೂ ಸಾರ್ಥಕತೆ ಮೆರೆದ ಪಾರ್ವತಮ್ಮ ರಾಜ್‌ಕುಮಾರ್‌

Update: 2017-05-31 18:31 IST

ಬೆಂಗಳೂರು, ಮೇ 31: ತನ್ನ ಪತಿಯ ಹಾದಿಯಲ್ಲೇ ನಡೆದ ಪಾರ್ವತಮ್ಮ ರಾಜ್‌ಕುಮಾರ್ ಅವರೂ ಕೂಡ ತಮ್ಮ ಕಣ್ಣುಗಳನ್ನು ನಾರಾಯಣ ನೇತ್ರಾಲಯದ ಡಾ.ರಾಜ್‌ಕುಮಾರ್ ನೇತ್ರ ಬ್ಯಾಂಕ್‌ಗೆ ದಾನ ಮಾಡುವ ಮೂಲಕ ಪಾರ್ವತಮ್ಮ ಸಾರ್ಥಕತೆ ಮರೆದಿದ್ದಾರೆ.

ವರ ನಟ ಡಾ.ರಾಜ್‌ಕುಮಾರ್ ಅವರಂತೆ ದೃಷ್ಟಿದೋಷವುಳ್ಳವರಿಗೆ ದೃಷ್ಟಿ ನೀಡುವ ಮಹತ್ತರ ಅಗತ್ಯವನ್ನು ಇತರರಿಗೆ ಮನವರಿಕೆ ಮಾಡುವ ಮೂಲಕ ಹಲವು ಜೀವಗಳಲ್ಲಿ ಬೆಳಕನ್ನು ತರಲು ಸ್ಫೂರ್ತಿ ತುಂಬಿದ್ದಾರೆ. ಪಾರ್ವತಮ್ಮ ಅವರ ಮರಣಾನಂತರ ಕುಟುಂಬವು ನಾರಾಯಣ ನೇತ್ರಾಲಯದ ಸಿಎಂಡಿ ಡಾ.ಕೆ.ಭುಜಂಗ ಶೆಟ್ಟಿ ಅವರನ್ನು ಸಂಪರ್ಕಿಸಿ ನೇತ್ರದಾನ ಮಾಡಿದರು.

ಕೆಲವರು ತಮ್ಮ ಜೀವನವನ್ನು ಮಹತ್ತರ ಧ್ಯೇಯಕ್ಕಾಗಿ ಜೀವಿಸುತ್ತಾರೆ ಮತ್ತು ಮರಣಾ ನಂತರವೂ ಅವರು ಅದನ್ನು ಸಾಬೀತುಪಡಿಸುತ್ತಾರೆ. ಪಾರ್ವತಮ್ಮ ರಾಜ್‌ಕುಮಾರ್ ಅವರು ತಮ್ಮ ಪತಿ ಡಾ.ರಾಜ್‌ಕುಮಾರ್ ಅವರಂತೆಯೇ ತಮ್ಮ ನೇತ್ರದಾನ ಮಾಡುವ ಮೂಲಕ ಈ ಪರಂಪರೆಯನ್ನು ಮುಂದುವರೆಸಿದ್ದಾರೆಂದು ವೈದ್ಯ ಭುಜಂಗಶೆಟ್ಟಿ ಬಣ್ಣಿಸಿದರು.

ನಾರಾಯಣ ನೇತ್ರಾಲಯದಲ್ಲಿ ನೇತ್ರ ಬ್ಯಾಂಕ್ ಉದ್ಘಾಟನೆ ವೇಳೆ ರಾಜ್ ಕುಮಾರ್ ತಮ್ಮ ಮರಣಾನಂತರ ಕಣ್ಣುಗಳನ್ನು ದಾನ ಮಾಡುವುದಾಗಿ ಪ್ರತಿಜ್ಞೆ ಮಾಡಿದ್ದರು. ನೇತ್ರ ಬ್ಯಾಂಕ್ ಅನ್ನು ಅವರು ಜೀವಿಸಿ ತೋರಿಸಿದ ಮೌಲ್ಯಗಳ ಅನ್ವಯ ಡಾ.ರಾಜ್ ನೇತ್ರ ಬ್ಯಾಂಕ್ ಎಂದು ಕರೆಯಲಾಗಿದ್ದು ಸ್ವತಃ ಅವರೇ ನೇತ್ರದಾನ ಮಾಡುವ ಮೂಲಕ ಅಸಂಖ್ಯಾತ ಜನರಿಗೆ ನೇತ್ರದಾನ ಮಾಡಲು ಉತ್ತೇಜಿಸಿದ್ದಾರೆ.

ಇತರರಿಗೆ ಮಾರ್ಗದರ್ಶಿಯಾಗಿ ಜೀವಿಸಿ ಮರಣಾನಂತರವೂ ತಮ್ಮ ನೇತ್ರದಾನ ಮಾಡಿ ಮಹತ್ತರ ತ್ಯಾಗದ ಈ ದಂಪತಿಗೆ ನನ್ನ ಕೃತಜ್ಞತೆಗಳು ಎಂದು ಅವರು ಹೇಳಿದರು.

ರಾಜ್ಯದಲ್ಲಿ ನಾರಾಯಣ ನೇತ್ರಾಲಯ ಅತ್ಯಂತ ದೊಡ್ಡ ನೇತ್ರ ಬ್ಯಾಂಕ್ ಆಗಿದ್ದೇವೆ. ಪ್ರಾರಂಭದಿಂದಲೂ 60 ಸಾವಿರಕ್ಕೂ ಹೆಚ್ಚು ಮಂದಿ ತಮ್ಮ ಕಣ್ಣುಗಳನ್ನು ದಾನ ಮಾಡಲು ಒಪ್ಪಿದ್ದಾರೆ ಮತ್ತು 10 ಸಾವಿರ ಮಂದಿ ತಮ್ಮ ಕಣ್ಣುಗಳನ್ನು ದಾನ ಮಾಡಿದ್ದಾರೆ. ಒಬ್ಬ ವ್ಯಕ್ತಿ ನಾಲ್ಕು ಜನರಿಗೆ ದೃಷ್ಟಿ ನೀಡಬಲ್ಲನು. ಆದುದರಿಂದ ಈ ದಂಪತಿಗಳ ಉದಾಹರಣೆಯನ್ನು ಪ್ರತಿಯೊಬ್ಬರೂ ಅನುಸರಿಸಿ ತಮ್ಮ ನೇತ್ರದಾನ ಮಾಡಲು ಮುಂದೆ ಬರಬೇಕೆಂದು ಡಾ. ಭುಜಂಗ ಶೆಟ್ಟಿ ಮನವಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News