ಗಣೇಶ್ ಗಟ್ಟಿ

Update: 2017-06-01 19:06 GMT

ಉಳ್ಳಾಲ, ಮೇ 1: ಖ್ಯಾತ ಕಬಡ್ಡಿ ಆಟಗಾರ ಗಣೇಶ್ ಗಟ್ಟಿ ತೊಕ್ಕೊಟ್ಟು (45)  ಉಳ್ಳಾಲ ಬೈಲ್‌ನ ತನ್ನ ಮನೆಯಲ್ಲಿ ಹೃದಯಾಘಾತಕ್ಕೊಳಗಾಗಿ ನಿಧನರಾದರು.
 ದಕ್ಷಿಣ ಕನ್ನಡ, ಕಾಸರಗೋಡು, ಉಡುಪಿ ಜಿಲ್ಲೆಗಳಲ್ಲಿ ನಡೆದಿದ್ದ ಕಬಡ್ಡಿ ಕ್ರೀಡೆಯಲ್ಲಿ ಗಣೇಶ್ ಗಟ್ಟಿ ಅವರು ಖ್ಯಾತ ಆಟಗಾರನಾಗಿ ಪ್ರಸಿದ್ದಿಯಾಗಿದ್ದರು.

ಮಂಗಳೂರಿನ ಸುಝುಕಿ ಕಂಪನಿಯಲ್ಲಿ ಮೋಟಾರ್ ಬೈಕ್ ಮೆಕ್ಯಾನಿಕ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಗಣೇಶ್ ಅವರು ಹೈಸ್ಕೂಲ್ ದಿನಗಳಿಂದಲೇ ಕಬಡ್ಡಿ ಕ್ರೀಡೆಯಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದರು.

ಉಳ್ಳಾಲ್ ಬೈಲ್‌ನಲ್ಲಿ "ಸುರಭಿ ಗೇಮ್ಸ್ ಟೀಮ್"ನ ಮುಖಾಂತರ ತ್ರಿವಳಿ ಜಿಲ್ಲೆಗಳಲ್ಲಿ ಆಯೋಜಿಸಲಾಗಿದ್ದ ಅನೇಕ ಕಬಡ್ಡಿ ಟೂರ್ನಿಗಳಲ್ಲಿ ಭಾಗವಹಿಸಿ ಪ್ರಶಸ್ತಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ತೊಕ್ಕೊಟ್ಟಿನಲ್ಲಿ "ನಿತ್ಯಾನಂದ ಯುವಕ ಮಂಡಲ"ದ ಸುವರ್ಣ ಮಹೋತ್ಸವದ ಪ್ರಯುಕ್ತ ಕಳೆದ ಮಾರ್ಚ್ ತಿಂಗಳಲ್ಲಿ ನಡೆದಿದ್ದ ಕಬಡ್ಡಿ ಟೂರ್ನಿಯಲ್ಲಿ ಅಂತಿಮವಾಗಿ ಸ್ಫರ್ಧಿಸಿದ್ದರು. ಗಣೇಶ್ ಅವರು ಉತ್ತಮ ಬೈಕ್ ಮೆಕ್ಯಾನಿಕ್ ಕೂಡಾ ಆಗಿದ್ದರು. ಅವರು ಇಬ್ಬರು ಪತ್ನಿ, ಪುತ್ರಿಯರು, ಸಹೋದರ, ಸಹೋದರಿಯರನ್ನು ಅಗಲಿದ್ದಾರೆ.

ಆಹಾರ ಸಚಿವರಾದ ಯು.ಟಿ ಖಾದರ್, ಜಿ.ಪಂ ಸದಸ್ಯೆ ಮಮತಾ ಡಿ.ಎಸ್ ಗಟ್ಟಿ, ಬಿಜೆಪಿ ಕ್ಷೇತ್ರಾಧ್ಯಕ್ಷ ಸಂತೋಷ್ ಬೋಳಿಯಾರ್, ಜಿಲ್ಲಾ ಉಪಾಧ್ಯಕ್ಷ ಚಂದ್ರಹಾಸ್ ಉಳ್ಳಾಲ್, ಮುಖಂಡರಾದ ಭಗವಾನ್‌ದಾಸ್ ಮೊದಲಾದ ಗಣ್ಯರು ಅಂತಿಮ ದರ್ಶನ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ