ಸಹಾರಾ ಮರುಭೂಮಿಯಲ್ಲಿ ಸಿಲುಕಿ 44 ಮಂದಿ ಸಾವು

Update: 2017-06-02 10:58 GMT

ಲಂಡನ್,ಸ ಜೂ. 2: ನೈಜೀರಿಯದಿಂದ ಲಿಬಿಯಕ್ಕೆ ಹೊರಟ ತಂಡದ ವಾಹನ ಸಹಾರಾ ಮರುಭೂಮಿಯಲ್ಲಿ ಸಿಲುಕಿಕೊಂಡ ಹಿನ್ನೆಲೆಯಲ್ಲಿ 44 ಮಂದಿಯ ಮೃತಪಟ್ಟಿದ್ದಾರೆ. ಇವರು ಪ್ರಯಾಣಿಸುತ್ತಿದ್ದ ವಾಹನ ಕೆಟ್ಟು ನಿಂತ ಪರಿಣಾಮ 44 ಮಂದಿ ದಾರುಣ ಅಂತ್ಯವಾಗಿದೆ. ಕುಡಿಯಲು ನೀರು ಸಿಗದಿರುವುದು ಸಾವಿಗೆ ಕಾರಣವಾಗಿದೆ ಎಂದು ರೆಡ್‌ಕ್ರಾಸ್ ಮೂಲಗಳು ತಿಳಿಸಿದೆ. ಆರು ಮಂದಿ ಬದುಕುಳಿದಿದ್ದರೂ ಅವರ ಆರೋಗ್ಯಸ್ಥಿತಿ ಚಿಂತಾಜನಕವಾಗಿದೆ.

ಹಸಿವು, ಬಡತನದಿಂದ ಬಳಲುತ್ತಿರುವ ಉತ್ತರ ಆಫ್ರಿಕದ ದೇಶಗಳಿಂದ ಇವರು ನೈಜರ್ ದಾರಿಯಾಗಿ ಲಿಬಿಯಕ್ಕೆ ಹೊರಟಿದ್ದರು. ನಂತರ ಅಲ್ಲಿಂದ ಮೆಡಿಟೇರಿಯನ್ ಸಮುದ್ರದಾಟಿ ಯುರೋಪ್‌ಗೆ ಹೋಗುವುದು ಇವರ ಉದ್ದೇಶವಾಗಿತ್ತು.ಸಹಾರಾ ಮರುಭೂಮಿಯ ಅಪಾಯಕಾರಿ ದೀರ್ಘಪ್ರಯಾಣದಲ್ಲಿ ಇವರು ಸಂಚರಿಸುತ್ತಿದ್ದ ವಾಹನ ಹಠಾತ್ತಾಗಿ ಕೆಟ್ಟು ನಿಂತಿತ್ತು. ಅವರು ಸಂಚರಿಸುತ್ತಿದ್ದ ಟ್ರಕ್‌ನಲ್ಲಿ ಕುಡಿಯುವ ನೀರು ಕೂಡ ತೆಗೆದಿರಿಸಿರಲಿಲ್ಲ. ಕಳೆದ ವರ್ಷ ಸಹಾರಾ ಮರುಭೂಮಿಯಲ್ಲಿ 20 ಮಕ್ಕಳ ಸಹಿತತ 34 ಮಂದಿ ವಲಸೆಗಾರರ ಮೃತದೇಹ ನೈಜರ್-ಅಲ್ಜೀರಿಯ ಗಡಿಯಲ್ಲಿ ಪತ್ತೆಯಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News