ವೃದ್ಧಾಶ್ರಮಗಳು ಅನಿವಾರ್ಯ: ಶಂಕರಮೂರ್ತಿ

Update: 2017-06-05 12:58 GMT

ಬೆಂಗಳೂರು, ಜೂ. 5: ಬದಲಾಗುತ್ತಿರುವ ಸಾಮಾಜಿಕ-ಆರ್ಥಿಕ ಪರಿಸ್ಥಿತಿಗಳು ಕುಟುಂಬ ವ್ಯವಸ್ಥೆಯಲ್ಲೂ ಬದಲಾವಣೆಯ ಸನ್ನಿವೇಶದಲ್ಲಿ ಬದುಕಿನ ಮುಸ್ಸಂಜೆಯಲ್ಲಿರುವ ವೃದ್ಧರಿಗೆ ಗೌರವಯುತ ಜೀವನ ನಡೆಸಲು ವೃದ್ಧಾಶ್ರಮಗಳು ಅನಿವಾರ್ಯ ಎಂದು ಸಭಾಪತಿ ಡಿ.ಎಚ್.ಶಂಕರಮೂರ್ತಿ ಹೇಳಿದ್ದಾರೆ.

ಸೋಮವಾರ ನಗರದ ನಿರ್ಮಾಣ್ ಶೆಲ್ಟರ್ಸ್ ಆಶ್ರಯದ ಎಲ್‌ಎನ್ ಪ್ರಬುದ್ಧಾಲಯದ ವಾರ್ಷಿಕೋತ್ಸವದ ಅಂಗವಾಗಿ ನಿಸರ್ಗ ಬಡಾವಣೆಯ ಐವರು ಹಿರಿಯರಿಗೆ ನಾಗರಿಕರ ಆಜೀವ ಸಾಧನಾ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು, ವೃದ್ಧಾಶ್ರಮಗಳಿಗೆ ಕುಟುಂಬದ ಹಿರಿಯ ಜೀವಗಳನ್ನು ಕಳುಹಿಸುವುದು ಸರಿ ಅಥವಾ ತಪ್ಪುಎಂದು ಪರಾಮರ್ಶೆ ಮಾಡುವುದಕ್ಕಿಂತ ಬದುಕಿನ ವಾಸ್ತವಗಳನ್ನು ಅರಿತುಕೊಳ್ಳಬೇಕು ಎಂದರು.

ವೃದ್ಧಾಶ್ರಮಗಳು, ವೃದ್ಧಾಲಯಗಳ ಬಗ್ಗೆ ಚರ್ಚೆ ನಡೆದಾಗಲೆಲ್ಲ ‘ಕಾಲ ಕೆಟ್ಟು ಹೋಯಿತು, ಜನ್ಮ ಕೊಟ್ಟ ಅಪ್ಪ-ಅಮ್ಮಂದಿರನ್ನು ಸಾಕಲಾಗದೆ ಮಕ್ಕಳು ವೃದ್ಧಾಶ್ರಮಗಳಿಗೆ ಸೇರಿಸುತ್ತಿದ್ದಾರೆ. ಇದು ಕುಟುಂಬ ವ್ಯವಸ್ಥೆಗೆ ಮಾರಕ ಎಂಬೆಲ್ಲ ಟೀಕೆಗಳು ಕೇಳಿ ಬರುತ್ತವೆ. ಆದರೆ, ಕಾಲ ಕೆಟ್ಟು ಹೋಗಿಲ್ಲ ಚೆನ್ನಾಗಿದೆ ಎಂಬುದಕ್ಕೆ ನಿರ್ಮಾಣ್ ಶೆಲ್ಟರ್ಸ್ ಸಂಸ್ಥೆ ನಿಸರ್ಗ ಬಡಾವಣೆಯಲ್ಲಿ ನಿರ್ಮಿಸಿ ನಿರ್ವಸುತ್ತಿರುವ ಹಿರಿಯರ ಮನೆ ಪ್ರಬುದ್ಧಾಲಯವೆ ಉದಾಹರಣೆ. ಇಲ್ಲಿರುವ 323 ಮಂದಿ ಹಿರಿಯ ಜೀಗಳನ್ನು ಇದರ ಸಂಸ್ಥಾಪಕ ಲಕ್ಷ್ಮೀನಾರಾಯಣ್ ಮತ್ತು ಅವರ ಸಿಬ್ಬಂದಿ ತಂಡ ಅತ್ಯಂತ ಜತನದಿಂದ ನೋಡಿಕೊಳ್ಳುತ್ತಿರುವುದೆ ಸಾಕ್ಷಿ ಎಂದೂ ಉದಾಹರಿಸಿದರು.

ಬದಲಾಗುತ್ತಿರುವ ಸಮಾಜದಲ್ಲಿ ಈವತ್ತಿನ ಜೀವನ ವ್ಯವಸ್ಥೆಯೂ ಬದಲಾಗಿದೆ. ನನ್ನ ಅಜ್ಜನಿಗೆ 52 ವರ್ಷ ಆದಾಗ ನಾವೆಲ್ಲ ಸಂತೋಷಪಟ್ಟು ಸಂಭ್ರಮ ಆಚರಣೆ ಮಾಡಿದ್ದೆವು. ನನ್ನ ತಂದೆಗೆ 60 ವರ್ಷ ತುಂಬಿದಾಗಲೂ ನಾವೆಲ್ಲ ಕುಟುಂಬದ ಸದಸ್ಯರು ಸಂತೋಷಪಟ್ಟಿದ್ದೆವು. ಆಗೆಲ್ಲ ಅಭಕ್ತ ಕುಟುಂಬಗಳು ಅಸ್ತಿತ್ವದಲ್ಲಿದ್ದವು. ಕಾಲ ಬದಲಾದಂತೆ ಕುಟುಂಬ ವ್ಯವಸ್ಥೆಯೂ ಬದಲಾಗಿದೆ. ಇದು ಅನಿವಾರ್ಯ. ಇದಕ್ಕಾಗಿ ದೂರುತ್ತಾ ಕೂರುವುದು ಸರಿಯಲ್ಲ ಎಂದೂ ಅವರು ಕಿಮಾತು ಹೇಳಿದರು.

ಕಾರ್ಯಕ್ರಮದ ನಿರ್ಮಾಣ್ ಸಂಸ್ಥೆಗಳ ಸಂಸ್ಥಾಪಕ ಲಕ್ಷ್ಮೀನಾರಾಯಣ್ ಪ್ರಶಸ್ತಿ ಪುರಸ್ಕೃತರಿಗೆ ತಲಾ 10 ಸಾವಿರ ರೂ.ನಗದು, ಸ್ಮರಣಿಕೆ ನೀಡಿ ಗೌರವಿಸಲಾಯಿತು. ಹಿರಿಯ ವಕೀಲ ಎಸ್.ಎಂ. ಪಾಟೀಲ್, ನಿವೃತ್ತ ಪ್ರಾಂಶುಪಾಲ ಪ್ರೊ.ನಾರಾಯಣ ಮಾದಾಪುರ್, ಪ್ರಬುದ್ಧಾಲಯದ ಸಿಇಒ ಸುಷ್ಮಾಮೂರ್ತಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News