ಹಣ ದುರುಪಯೋಗ ಆರೋಪ : ಆರೋಗ್ಯಾಧಿಕಾರಿ ರಾಜೇಶ್ ಅಮಾನತ್ತು
Update: 2017-06-05 22:10 IST
ಬೆಂಗಳೂರು, ಜೂ. 5: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವಿವಿಧ ಜಿಲ್ಲೆಗಳ ಮೂವರು ವೈದ್ಯರು ಸೇರಿದಂತೆ ಓರ್ವ ಅಧೀಕ್ಷಕರನ್ನು ಅಮಾನತ್ತುಗೊಳಿಸಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತರು ಸೋಮವಾರ ಆದೇಶ ಹೊರಡಿಸಿದ್ದಾರೆ.
ಹಾವೇರಿ ಜಿಲ್ಲಾಸ್ಪತ್ರೆಯ ನಿವಾಸಿ ವೈದ್ಯಾಧಿಕಾರಿ ಡಾ.ಟಿ.ನಾಗರಾಜ ನಾಯಕ್ ಹಾಗೂ ಶಿವಮೊಗ್ಗ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಜೇಶ್ ಸುರಗಿಹಳ್ಳಿ ಇವರನ್ನು ಹಣ ದುರುಪಯೋಗ ಆರೋಪದ ಮೇಲೆ ಸರಕಾರಿ ಸೇವೆಯಿಂದ ಅಮಾನತ್ತುಗೊಳಿಸಲಾಗಿದೆ.
ವಿಜಯಪುರ ಜಿಲ್ಲಾ ತರಬೇತಿ ಕೇಂದ್ರ ಪ್ರಾಂಶುಪಾಲ ಡಾ.ಸುರೇಖ ಹಡಗಲಿ ಮತ್ತು ಕಚೇರಿ ಅಧೀಕ್ಷಕಿ ನಸೀಮಾ ಬೇಗಂ ಹೈದರಾಬಾದ್ ಅವರನ್ನು ಭ್ರಷ್ಟಾಚಾರ ನಿಗ್ರಹದಳ ದಾಳಿ ಪ್ರಕರಣ ಹಿನ್ನೆಲೆಯಲ್ಲಿ ಸರಕಾರಿ ಸೇವೆಯಿಂದ ಅಮಾನತ್ತು ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.