ಹೈಸ್ಕೂಲ್ ಪರೀಕ್ಷೆ ಬರೆದ 81 ವರ್ಷದ ಉತ್ಸಾಹಿ

Update: 2017-06-06 15:21 GMT
ಪರೀಕ್ಷೆಯಲ್ಲಿ ತನ್ನ ಸಹಾಯಕಿಗೆ ಉತ್ತರವನ್ನು ಹೇಳುತ್ತಿರುವ ಅಬ್ದುಲ್ ಖಾದರ್ ಅಬು ಅಜಮೆಯಾಹ್.

ಪಶ್ಚಿಮ ದಂಡೆ (ಫೆಲೆಸ್ತೀನ್), ಜೂ. 6: 81 ವರ್ಷದ ಅಬ್ದುಲ್ ಖಾದರ್ ಅಬು ಅಜಮೆಯಾಹ್ ತನ್ನ ಹೈಸ್ಕೂಲ್ ಪರೀಕ್ಷೆಯನ್ನು ಇತ್ತೀಚೆಗೆ ಬರೆದರು.
ಇಸ್ರೇಲ್ ಆಕ್ರಮಿತ ಪಶ್ಚಿಮ ದಂಡೆಯ ಹೆಬ್ರಾನ್ ನಿವಾಸಿಯಾಗಿರುವ ನಿವೃತ್ತ ಆಹಾರ ವ್ಯಾಪಾರಿ ಕಳೆದ ವರ್ಷ ರಾಷ್ಟ್ರೀಯ ಪರೀಕ್ಷೆಗೆ ಮೊದಲ ಬಾರಿಗೆ ಹಾಜರಾಗಿದ್ದರು. ಆದರೆ, ಅದರಲ್ಲಿ ಅವರು ಯಶಸ್ವಿಯಾಗಿರಲಿಲ್ಲ. ಹಾಗಾಗಿ, ಅವರು ಈ ಬಾರಿ ಇನ್ನೊಮ್ಮೆ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.

14 ಮಕ್ಕಳ ತಂದೆಯಾಗಿರುವ ಅವರು ದಿನಕ್ಕೆ 5 ಗಂಟೆ ಓದುತ್ತಿದ್ದರು. ತಮ್ಮಿಂದಿಗೆ ಆಟ ಆಡಬೇಕೆಂಬ 36 ಮೊಮ್ಮಕ್ಕಳ ಒತ್ತಾಯದ ನಡುವೆಯೂ ಅವರು ಓದಿನ ಕಡೆಗೆ ಗಮನ ಕೇಂದ್ರೀಕರಿಸುತ್ತಿದ್ದರು.

‘‘ನನಗೆ ಶಿಕ್ಷಣ ಇಷ್ಟ’’ ಎಂದು ಅವರು ಹೆಮ್ಮೆಯಿಂದ ಹೇಳುತ್ತಾರೆ. ‘‘ಕಲಿಯಲು ಯಾರಿಗೂ ಯಾವುದೇ ಮಿತಿ ಇಲ್ಲ. ಕಲಿಕೆ ನಿರ್ದಿಷ್ಟ ಪ್ರಾಯದಲ್ಲಿ ನಿಲ್ಲುವುದಿಲ್ಲ’’ ಎಂದು ಅವರು ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News