ಭಾರತೀಯ ವಾಯು ಪ್ರದೇಶ ಉಲ್ಲಂಘಿಸಿಲ್ಲ: ಚೀನಾ ಸೇನೆ

Update: 2017-06-06 16:16 GMT

ಬೀಜಿಂಗ್, ಜೂ. 6: ತನ್ನ ಸೇನಾ ಹೆಲಿಕಾಪ್ಟರ್‌ಗಳು ಭಾರತೀಯ ವಾಯುಪ್ರದೇಶವನ್ನು ಉಲ್ಲಂಘಿಸಿವೆ ಎಂಬ ಆರೋಪಗಳನ್ನು ಚೀನಾದ ಸೇನೆ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ಮಂಗಳವಾರ ನಿರಾಕರಿಸಿದೆ.

ಈ ಘಟನೆಯನ್ನು ಚೀನಾ ಅಧಿಕಾರಿಗಳೊಂದಿಗೆ ಪ್ರಸ್ತಾಪಿಸುವುದಾಗಿ ವಿದೇಶಾಂಗ ವ್ಯವಹಾರಗಳ ಸಚಿವೆ ಸುಶ್ಮಾ ಸ್ವರಾಜ್ ಹೇಳಿದ ಗಂಟೆಗಳ ಬಳಿಕ ಈ ಪ್ರತಿಕ್ರಿಯೆ ಹೊರಬಿದ್ದಿದೆ.

ಉತ್ತರಾಖಂಡದ ಚಮೋಲಿ ಜಿಲ್ಲೆಯ ಬಾರಾಹೋತಿ ವಲಯದಲ್ಲಿ ತನ್ನ ಸೇನಾ ಹೆಲಿಕಾಪ್ಟರ್‌ಗಳು ಹಾರಾಡುತ್ತಿದ್ದುದನ್ನು ಚೀನಾ ಸೋಮವಾರ ಸಮರ್ಥಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News