ಕೇರಳ: ಗೂಡಂಗಡಿಗಳಿಗೆ ಒಂದೇ ಬ್ರಾಂಡ್; ಕಾರ್ಮಿಕರಿಗೆ ಒಂದೇ ವೇಷ !

Update: 2017-06-12 10:17 GMT

ತಿರುವನಂತಪುರಂ,ಜೂ. 12: ನಗರದ ಗೂಡಂಗಡಿಗಳಿಗೆ ಒಂದೇ ಬ್ರಾಂಡ್, ಕೆಲಸಗಾರರಿಗೆ ಒಂದೇ ಸಮವಸ್ತ್ರ. ಬೀದಿಬದಿ ವ್ಯಾಪಾರಿಗಳ ಪುನರ್ವಸತಿಯ ಭಾಗವಾಗಿ ಗೂಡಂಗಡಿಗಳ ನವೀಕರಣಕ್ಕೆ ಕೇರಳ ಸಿದ್ಧತೆ ನಡೆಸುತ್ತಿದೆ.

 ಬೀದಿ ಬದಿ ವ್ಯಾಪಾರಿಗಳ ಸಂಪಾದನೆಯ ಮಾರ್ಗವನ್ನು ಸಂರಕ್ಷಿಸುವುದು ಮತ್ತು ನಿಯಂತ್ರಿಸುವುದಕ್ಕಾಗಿ ಕಾನೂನಿನ ಕರಡು ಸಿದ್ಧಪಡಿಸಲಾಗಿದೆ. ರಾಷ್ಟ್ರೀಯ ನಗರಜೀವನ ಅಭಿಯಾನದ ಮುಂದಿನ ಹೆಜ್ಜೆ ,ಬೀದಿ ಬದಿ ವ್ಯಾಪಾರಿಗಳ ಪುನರ್ವಸತಿಯಾಗಿದ್ದು, ಕೇರಳದಲ್ಲಿ ಇಂನ್ನು ಕುಟುಂಬಶ್ರೀಯಾಗಿದೆ. ಇದಕ್ಕಾಗಿ ಬೀದಿಬದಿ ವ್ಯಾಪಾರಿಗಳ ಪ್ರಾಥಮಿಕ ಸವೇರ್  ಪೂರ್ಣವಾಗಿದೆ.

93 ನಗರಸಭಾ ಪ್ರದೇಶಗಳಲ್ಲಿ 18,000 ಬೀದಿ ಬದಿ ವ್ಯಾಪಾರಿಗಳಿದ್ದಾರೆಂದು ಸಮೀಕ್ಷೆಯಲ್ಲಿ ತಿಳಿದುಬಂದಿದೆ. ಇವರಲ್ಲಿ ಶೇ.60ರಷ್ಟು ಮಂದಿ ಆಹಾರವಸ್ತುಗಳನ್ನು ಮಾರಾಟಮಾಡುತ್ತಿದ್ದಾರೆ. ಇವರಿಗೆ ಮೂಲಭೂತ ಸೌಕರ್ಯ ಒದಗಿಸಿ, ಆಹಾರದ ಗುಣಮಟ್ಟವನ್ನು ಖಚಿತಪಡಿಸಿ ಸಾಮಾನ್ಯರು ಆಶ್ರಯಿಸಬಹುದಾದ ಆಹಾರ ಮಾರಾಟ ಶೃಂಖಲೆ ರೂಪಿಸುವುದು ಅಭಿಯಾನದ ಉದ್ದೇಶವಾಗಿದೆ ಎಂದು ಕೇರಳದ ಕಾರ್ಯಕ್ರಮ ಅಧಿಕಾರಿ ಬಿನು ಫ್ರಾನ್ಸಿಸ್ ತಿಳಿಸಿದ್ದಾರೆ. ಸಂಚಾರಕ್ಕೆ ಅಡ್ಡಿಯಾಗದ ಸ್ಥಳಗಳಲ್ಲಿ ಈಗ ವ್ಯಾಪಾರ ಮಾಡುತ್ತಿರುವವರಿಗೆ ತಾತ್ಕಾಲಿಕ ಸೌಕರ್ಯ ಒದಗಿಸಲಾಗುವುದು. ಅಲ್ಲದ ಸ್ಥಳಗಳ ವ್ಯಾಪಾರಿಗಳನ್ನು ಒಗ್ಗೂಡಿಸಿ ಬೇರೆ ಸ್ಥಳಕ್ಕೆ ವರ್ಗಾಯಿಸಲಾಗುವುದು. ಇವರಿಗಾಗಿ ತಾತ್ಕಾಲಿಕ ಕಟ್ಟಡ, ವಿದ್ಯುತ್, ನೀರು ಒದಗಿಸಲಾಗುವುದು. ಇವರಿಂದ ಅಗತ್ಯವೆಂದಾದರೆ ಸಣ್ಣ ಮೊತ್ತದ ಬಾಡಿಗೆ ಪಡೆಯಲಾಗುವುದು. ಕಲ್ಲಿಕೋಟೆ, ಕಾಸರಗೋಡು ಬಸ್‌ಸ್ಟಾಂಡ್ ಪರಿಸರಗಳಲ್ಲಿ ವ್ಯಾಪಾರಿಗಳ ಪುನರ್ವಸತಿ ಪ್ಯಾಕೇಜ್ ಸಿದ್ಧವಾಗಿದೆ. ಹೀಗೆ ಎಲ್ಲಕಡೆ ಪ್ಯಾಕೇಜ್ ಸಿದ್ಧಪಡಿಸಲಾಗುವುದು ಎಂದು ಬಿನು ಫ್ರಾನ್ಸಿಸ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News