ಪ್ಲಾಸ್ಟಿಕ್ ಅಕ್ಕಿ, ಪ್ಲಾಸ್ಟಿಕ್ ಮೊಟ್ಟೆ ವದಂತಿ: ರಮೇಶ್‌ಕುಮಾರ್

Update: 2017-06-12 14:38 GMT

ಬೆಂಗಳೂರು, ಜೂ.12: ರಾಜ್ಯದ ಮಾರುಕಟ್ಟೆಗಳಿಗೆ ಯಾವುದೇ ಪ್ಲಾಸ್ಟಿಕ್ ಸಕ್ಕರೆ, ಪ್ಲಾಸ್ಟಿಕ್ ಅಕ್ಕಿ, ಪ್ಲಾಸ್ಟಿಕ್ ರಾಗಿ ಹಾಗೂ ಪ್ಲಾಸ್ಟಿಕ್ ಮೊಟ್ಟೆಗಳು ಸರಬರಾಜು ಆಗಿಲ್ಲ. ಆದರೆ, ಇದು ಬರೀ ವದಂತಿ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ರಮೇಶ್‌ಕುಮಾರ್ ಸ್ಪಷ್ಟಪಡಿಸಿದ್ದಾರೆ.

ಸೋಮವಾರ ವಿಧಾನ ಪರಿಷತ್‌ನ ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿ ಸದಸ್ಯರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಹಾಗೂ ರಘುನಾಥರಾವ್ ಮಲ್ಕಾಪುರೆ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಅವರು, ಸಂಶಯಾಸ್ಪದವಿರುವ ಸಕ್ಕರೆ, ಅಕ್ಕಿ, ಮೊಟ್ಟೆ, ರಾಗಿ ಆಹಾರ ಪದಾರ್ಥಗಳನ್ನು ತರಿಸಿಕೊಂಡು ಪರಿಶೀಲಿಸಲಾಗಿದ್ದು ಯಾವುದೇ ನಕಲಿ ಪದಾರ್ಥಗಳು ಕಂಡು ಬಂದಿಲ್ಲ ಹಾಗೂ ಪ್ರಕರಣಗಳು ದಾಖಲಾಗಿಲ್ಲ ಎಂದು ಸ್ಪಷ್ಟಪಡಿಸಿದರು.

ಮಾರುಕಟ್ಟೆಯಲ್ಲಿ ಒಂದು ಕೆಜಿ ಅಕ್ಕಿಗೆ 40 ರಿಂದ 60 ರೂ.ಬೆಲೆ ಇದೆ. ಆದರೆ, ಒಂದು ಕೆಜಿ ಪ್ಲಾಸ್ಟಿಕ್ ಅಕ್ಕಿಯನ್ನು ತಯಾರಿಸಿ ಮಾರಾಟ ಮಾಡಿದರೆ 200 ರೂ.ಬೆಲೆ ಆಗುತ್ತದೆ. ಹೀಗಾಗಿ, ಯಾರೂ ಪ್ಲಾಸ್ಟಿಕ್ ಅಕ್ಕಿಯನ್ನು ತಯಾರಿಸುವುದಿಲ್ಲ ಹಾಗೂ ಇದರ ಬಗ್ಗೆ ತನಿಖೆ ನಡೆಸುವ ಅವ ್ಯಕತೆಯೂ ಇಲ್ಲ ಎಂದು ಹೇಳಿದರು.

ಕೃಷ್ಣರಾಜ ಪೇಟೆ ಹಾಗೂ ಮದ್ದೂರಿನ ಜನರು ಪ್ಲಾಸ್ಟಿಕ್ ಮೊಟ್ಟೆಗಳನ್ನು ತಿಂದು ಆಸ್ಪತ್ರೆಗೆ ದಾಖಲಾಗಿದ್ದಾರಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು ಆ ಬಗ್ಗೆ ಯಾವುದೇ ಮಾಹಿತಿ ತಮ್ಮ ಗಮನಕ್ಕೆ ಬಂದಿಲ್ಲ ಎಂದು ಹೇಳಿದರು.

ಇದೇ ವೇಳೆಯಲ್ಲಿ ಮಾತನಾಡಿದ ಸಚಿವ ಯು.ಟಿ.ಖಾದರ್ ಅವರು, ಅನ್ನಭಾಗ್ಯದಲ್ಲಿ ಯಾವುದೇ ಪ್ಲಾಸ್ಟಿಕ್ ಅಕ್ಕಿ ಬರುವುದಿಲ್ಲ. ಏಕೆಂದರೆ ಆ ಅಕ್ಕಿಯನ್ನು ಫುಡ್ ಕಾರ್ಪೂರೇಷನ್ ಇಂಡಿಯಾದವರೇ ಪರಿಶೀಲನೆ ನಡೆಸಿ ಕರ್ನಾಟಕ ರಾಜ್ಯಕ್ಕೆ ಸರಬಾಜು ಮಾಡುತ್ತಾರೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News