ಮಹಿಳೆಯ ಕಿವಿಯಿಂದ ತೆವಳುತ್ತಾ ಬಂತು ಜೇಡ !

Update: 2017-06-13 12:58 GMT

ಬೆಂಗಳೂರು , ಜೂ. 13 : 49 ವರ್ಷದ ಲಕ್ಷ್ಮಿ ತಮ್ಮ ಮನೆಯ ವರಾಂಡದಲ್ಲಿ ಮಧ್ಯಾಹ್ನ ಮಲಗಿದ್ದರು. ನಿದ್ರೆಯಿಂದ ಎಚ್ಚರವಾದಾಗ ತೀವ್ರ ತಲೆನೋವು ಹಾಗು ಬಲ ಕಿವಿಯಲ್ಲಿ ಝುಮ್ಮೆನಿಸುವಂತಹ ಸಂವೇದನೆ ಲಕ್ಷ್ಮಿಯನ್ನು ಕಾಡುತ್ತಿತ್ತು. ಏನೆಂದು ನೋಡಲು ಕಿವಿಗೆ ಬೆರಳು ಹಾಕಿ ತೆಗೆದ ಮೇಲೆ ಲಕ್ಷ್ಮಿಗೆ ನೋವು ಸಹಿಸುವುದೇ ಅಸಾಧ್ಯವಾಯಿತು. ತಕ್ಷಣ ಅವರನ್ನು ನಗರದ ಕೊಲಂಬಿಯಾ ಏಷಿಯಾ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. 

ತಪಾಸಣೆ ನಡೆಸಿದ ವೈದ್ಯರಿಗೆ ಕಿವಿಯೊಳಗೆ ಅನಗತ್ಯ ಅತಿಥಿಯೊಬ್ಬರು ಸೇರಿಕೊಂಡಿರುವುದು ಖಚಿತವಾಯಿತು. ದ್ರವ ಔಷಧಿಯೊಂದನ್ನು ಕಿವಿಗೆ ಸುರಿದ ವೈದ್ಯರು ಟಾರ್ಚ್ ಬೆಳಕು ಹಾಕಿ ಆ ವಿಶೇಷ ಅತಿಥಿ ಒತ್ತಾಯಪೂರ್ವಕವಾಗಿ ಹೊರಬರುವಂತೆ ಮಾಡಿದರು. ಆಗ ಬಂತು ನೋಡಿ ..ಜೀವಂತ ಜೇಡರ ಹುಳ ತೆವಳಿಕೊಂಡು ಕಿವಿಯಿಂದ ಹೊರಗೆ ! 

ಇಡೀ ಪ್ರಕ್ರಿಯೆಯನ್ನು ವೀಡಿಯೊ ರೆಕಾರ್ಡ್ ಮಾಡಲಾಯಿತು. 

ಹೀಗೆ ಕಿವಿಗೆ ಏನಾದರೊಂದು ಹೋಗುವುದು ಸಾಮಾನ್ಯ. ಆದರೆ ಜೀವಂತ ಜೇಡ ಒಳಹೊಕ್ಕಿದ್ದು ಅದನ್ನು ತೆಗೆಯುವುದು, ಆ ಸಂದರ್ಭದಲ್ಲಿ ಮಹಿಳೆಯ ನೋವು, ಆಕೆಯ ಭಯ ಇವೆಲ್ಲವನ್ನೂ ನಿಭಾಯಿಸುವುದು ಸವಾಲು ಎಂದು ಆಸ್ಪತ್ರೆಯ ವೈದ್ಯರೊಬ್ಬರು ಹೇಳಿದ್ದಾರೆ. ಮಹಿಳೆಯ ಕಿವಿಗೆ ಹೆಚ್ಚು ಹಾನಿ ಆಗಿಲ್ಲ ಎಂದೂ ವೈದ್ಯರು ದೃಢಪಡಿಸಿದ್ದಾರೆ. 

ವೀಡಿಯೊ ನೋಡಿ :

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News