ಡಿ.ಎಚ್.ಶಂಕರಮೂರ್ತಿ ದಿಢೀರ್ ಅಸ್ವಸ್ಥ: ಆಸ್ಪತ್ರೆಗೆ ದಾಖಲು

Update: 2017-06-13 16:05 GMT

ಬೆಂಗಳೂರು, ಜೂ.13: ವಿಧಾನ ಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ ವಿಧಾನ ಸಭೆಯ ತಮ್ಮ ಕಚೇರಿಯಲ್ಲಿ ಉಪ್ಪಿಟ್ಟು ತಿನ್ನುವಾಗ ಆಕಸ್ಮಿಕವಾಗಿ ನಾಲಗೆ ಕಚ್ಚಿಕೊಂಡು ಅಸ್ವಸ್ಥಗೊಂಡಿದ್ದು, ಈ ಹಿನ್ನೆಲೆಯಲ್ಲಿ ಅವರನ್ನು ಚಿಕಿತ್ಸೆಗಾಗಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಸಂದರ್ಭದಲ್ಲಿ ಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಅವರು ಶಂಕರ್‌ಮೂರ್ತಿ ಜೊತೆಗೆ ಇದ್ದರೆಂದು ಹೇಳಲಾಗುತ್ತಿದ್ದು, ಅವರೇ ವಿಧಾನ ಸಭೆಯ ವೈದ್ಯರನ್ನು ಕರೆಯಿಸಿ ಪ್ರಥಮ ಚಿಕಿತ್ಸೆ ಕೊಡಿಸಿದ್ದಾರೆ. ಬಳಿಕ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ನಗರ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಮಂಗಳವಾರ ಕಾಂಗ್ರೆಸ್ ಸದಸ್ಯರುಗಳು ಪರಿಷತ್‌ನಲ್ಲಿ ಡಿ.ಎಚ್.ಶಂಕರಮೂರ್ತಿ ವಿರುದ್ಧ ಅವಿಶ್ವಾಸ ನಿಲುವಳಿ ಮಂಡಿಸಿದ್ದರು. ಹಾಗೂ ಬುಧವಾರವ ಈ ವಿಚಾರ ಚರ್ಚೆಗೆ ಬರುವ ಸಾಧ್ಯತೆಯಿತ್ತು. ಆದರೆ, ಮಂಗಳವಾರ ಸಂಜೆ ಶಂಕರಮೂರ್ತಿ ಅವರು ದಿಢೀರ್ ಆಗಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದರಿಂದ ಚರ್ಚೆಯ ವಿಚಾರ ಮುಂದೆ ಹೋಗುವ ಸಾಧ್ಯತೆಯಿದೆ.

ಆಡಳಿತ ಪಕ್ಷದ ಸದಸ್ಯರಾದ ವಿ.ಎಸ್. ಉಗ್ರಪ್ಪ, ಶರಣಪ್ಪ ಮಟ್ಟೂರು ಸೇರಿ ಮತ್ತಿತರರು ವಿಧಾನ ಪರಿಷತ್ ಕಾರ್ಯವಿಧಾನ ಹಾಗೂ ನಡವಳಿಕೆಯ ನಿಯಮ-165 ಹಾಗೂ ಸಂವಿಧಾನದ 183ನೆ ಅನುಚ್ಛೇದದ ಸಿ ಖಂಡದಡಿ ಸಭಾಪತಿ ಶಂಕರಮೂರ್ತಿ ಅವರನ್ನು ಸಭಾಪತಿ ಸ್ಥಾನದಿಂದ ತೆಗೆದು ಹಾಕುವ ನಿರ್ಣಯವನ್ನು ಸದನದಲ್ಲಿ ಮಂಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News