×
Ad

‘ಅಕ್ಕ’ ಸಮ್ಮೇಳನಕ್ಕೆ 2016ರಲ್ಲಿ 60 ಲಕ್ಷ ರೂ.ಅನುದಾನ: ಸಚಿವೆ ಉಮಾಶ್ರೀ

Update: 2017-06-15 19:39 IST

ಬೆಂಗಳೂರು, ಜೂ. 15: ಅಮೆರಿಕಾದಲ್ಲಿನ ಕನ್ನಡಿಗರು ‘ಅಕ್ಕ’ ಸಮ್ಮೇಳನ ಆಯೋಜಿಸುತ್ತಿದ್ದು, ಅಲ್ಲಿ ಪಾಲ್ಗೊಳ್ಳುವ ಪ್ರತಿನಿಧಿಗಳಿಗೆ ಸರಕಾರ ಯಾವುದೇ ಮಾನದಂಡ ನಿಗದಿಪಡಿಸುವುದಿಲ್ಲ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ಸ್ಪಷ್ಟಪಡಿಸಿದ್ದಾರೆ.

ಗುರುವಾರ ವಿಧಾನಸಭೆ ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿ ಸದಸ್ಯ ಸುನೀಲ್ ಕುಮಾರ್ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಅವರು, 2014ನೆ ಸಾಲಿನಲ್ಲಿ 35 ಲಕ್ಷ ರೂ. ಹಾಗೂ 2016ನೆ ಸಾಲಿನಲ್ಲಿ 60 ಲಕ್ಷ ರೂ.ಗಳನ್ನು ಅಕ್ಕ ಸಮ್ಮೇಳನಕ್ಕೆ ರಾಜ್ಯ ಸರಕಾರ ನೆರವು ನೀಡಿದೆ ಎಂದು ಮಾಹಿತಿ ನೀಡಿದರು.

ಅಮೆರಿಕಾದಲ್ಲಿನ ಕನ್ನಡಿಗರು ಅಕ್ಕ ಸಮ್ಮೇಳನದ ಮೂಲಕ ಕನ್ನಡದ ಕೆಲಸ ಮಾಡುತ್ತಿದ್ದು, ಅವರಿಗೆ ಸರಕಾರ ನೆರವು ನೀಡಿದೆ. ಅಲ್ಲಿ ಪಾಲ್ಗೊಳ್ಳುವ ಪ್ರತಿನಿಧಿಗಳಿಗೆ ಸರಕಾರ ಮಾನದಂಡ ನಿಗದಿಪಡಿಸಲು ಆಗುವುದಿಲ್ಲ ಎಂದು ಉಮಾಶ್ರೀ ಸ್ಪಷ್ಟಣೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News