ಜೂ. 18: ಬಾಲಸಾಹಿತಿ ಪ್ರಶಸ್ತಿ ಪ್ರದಾನ

Update: 2017-06-15 14:23 GMT

ಬೆಂಗಳೂರು, ಜೂ.15: ತೊದಲು ನುಡಿ ಮಕ್ಕಳ ಸಾಹಿತ್ಯ ಮಾಸಿಕ ಪತ್ರಿಕೆಯ ನಾಲ್ಕನೆ ವರ್ಷದ ವಾರ್ಷಿಕ ಸಂಚಿಕೆ ಬಿಡುಗಡೆ ಹಾಗೂ ‘ಬಾಲ ಸಾಹಿತಿ’ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಜೂ.18 ರಂದು ನಗರದ ವೈಟ್‌ಫೀಲ್ಡ್‌ನಲ್ಲಿರುವ ವೀರಭದ್ರ ಸ್ವಾಮಿ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪತ್ರಿಕೆಯ ಪ್ರಧಾನ ಸಂಪಾದಕಿ ಸುಷ್ಮಾಶಂಕರ್, ಮಕ್ಕಳಿಗಾಗಿ ಅನೇಕ ಪತ್ರಿಕೆಗಳಿದ್ದರೂ ಎಲ್ಲವನ್ನು ಹಿರಿಯರು, ಅನುಭವಸ್ಥರು ಬರೆಯುತ್ತಾರೆ. ಆದರೆ, ವಿಶೇಷವಾಗಿ ಮಕ್ಕಳೇ ಬರೆದು, ಪ್ರಸಾರ ಮಾಡುವ ನಿಟ್ಟಿನಲ್ಲಿ ಆರಂಭವಾದದ್ದೆ ತೊದಲು ನುಡಿ ಪತ್ರಿಕೆಯಾಗಿದೆ ಎಂದು ಹೇಳಿದರು.

ಶೈಕ್ಷಣಿಕ, ಕ್ರೀಡೆ, ಸಾಂಸ್ಕೃತಿಕ ಪರವಾದ ಎಲ್ಲ ಕ್ಷೇತ್ರದಲ್ಲಿ ಶಾಲಾ ಮಕ್ಕಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ‘ಬಾಲ ಸಾಹಿತ್ಯ ಪ್ರಶಸ್ತಿ’ ನೀಡಲಾಗುತ್ತಿದೆ. 2016-17 ನೆ ಸಾಲಿನ ಪ್ರಶಸ್ತಿಯನ್ನು ಪ್ರಮೀಳ ಕೆ ಕೊಪ್ಪಾಸ್(ಕಂದಗಲ್ಲು), ಆರ್.ಆರ್.ಲೋಹಿತ್(ವೈಟ್‌ಫೀಲ್ಡ್), 2015-16 ನೆ ಸಾಲಿನ ಪ್ರಶಸ್ತಿಯನ್ನು ಜಿ.ಟಿ.ಅನಿಲ್‌ಕುಮಾರ್(ಮಂಡ್ಯ), ಎಸ್.ವರ್ಷಿತ (ಬೆಂಗಳೂರು) ನೀಡಲಾಗುತ್ತಿದೆ. ಹಾಗೂ 2014-15 ನೆ ಸಾಲಿನ ಪ್ರಶಸ್ತಿಯನ್ನು ಜಿ.ಅಮೃತ ವರ್ಷಿಣಿ(ಗೌರಿಬಿದನೂರು), ಕೆ.ಎಂ.ವಿದ್ಯಾಶ್ರೀ(ಕೋಲಾರ), ಶ್ರೀಮುಖಿ(ಬೆಂಗಳೂರು), ಎನ್.ಭಾಸ್ಕರ್ (ದೊಡ್ಡಬಳ್ಳಾಪುರ), ಬಿ.ರಚನ(ಬೆಂಗಳೂರು) ಇವರಿಗೆ ನೀಡಲಾಗುತ್ತಿದೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News