​ಕಾರ್ಕಳ: ಸಿಡಿಲಿಗೆ ಕಾಲೇಜಿನ 8 ಸಿಸಿ ಕೆಮರಾ ಢಮಾರ್

Update: 2017-06-15 14:30 GMT

ಉಡುಪಿ, ಜೂ.15: ಇಂದು ಅಪರಾಹ್ನ 12:30ರ ಸುಮಾರಿಗೆ ಬಡಿದ ಸಿಡಿಲಿಗೆ ಕಾರ್ಕಳ ಸರಕಾರಿ ಪದವಿ ಪೂರ್ವ ಕಾಲೇಜಿನ ಎಂಟು ಸಿಸಿ ಕೆಮರಾ, ಅದಕ್ಕೆ ಸಂಬಂಧಿಸಿದ ಮಾನಿಟರ್, ಕಂಪ್ಯೂಟರ್, ಹಾರ್ಡ್ ಡಿಸ್ಕ್‌ಗಳೆಲ್ಲವೂ ಸಂಪೂರ್ಣ ಹಾನಿಗೊಂಡ ಘಟನೆ ನಡೆದಿದೆ.

ಕೇವಲ ನಾಲ್ಕೈದು ತಿಂಗಳ ಹಿಂದಷ್ಟೇ ಪರೀಕ್ಷೆಯ ಸಂದರ್ಭದಲ್ಲಿ ಸಿಸಿ ಕೆಮರಾಗಳನ್ನು ಕಾಲೇಜಿನಲ್ಲಿ ಅಳವಡಿಸಲಾಗಿತ್ತು. ಇಂದು ಅಪರಾಹ್ನ 12:30ಕ್ಕೆ ಬಡಿದ ಒಂದೇ ಒಂದು ಸಿಡಿಲು ಇವೆಲ್ಲವನ್ನೂ ಹಾನಿಗೊಳಿಸಿತು. ಕಾಲೇಜು ಪಕ್ಕದ ಅಶ್ವಥ ಮರಕ್ಕೆ ಬಡಿದ ಸಿಡಿಲು ಅಲ್ಲಿಂದ ಕಾಲೇಜಿನ ಸಿಸಿ ಕೆಮರಾ ವಯರಿಂಗ್‌ಗೆ ಬಡಿದು ಅವುಗಳಷ್ಟೇ ಹಾನಿಗೊಂಡವು.

ಉಳಿದಂತೆ ಕಾಲೇಜಿಗಾಗಲೀ, ಕಾಲೇಜಿನಲ್ಲಿದ್ದ ವಿದ್ಯಾರ್ಥಿಗಳಿಗಾಗಲೀ, ಉಳಿದ ವಿದ್ಯುತ್ ಮತ್ತು ಇಲೆಕ್ಟ್ರಾನಿಕ್ ಉಪಕರಣಗಳಿಗಾಗಲೀ ಯಾವುದೇ ಹಾನಿ ಉಂಟಾಗಿಲ್ಲ. ಇದರಿಂದ ಒಟ್ಟು ಸುಮಾರು ಎರಡು ಲಕ್ಷ ರೂ. ನಷ್ಟದ ಅಂದಾಜು ಮಾಡಲಾಗಿದೆ ಎಂದು ಕಾರ್ಕಳ ತಾಲೂಕು ಕಚೇರಿಯ ಪ್ರಾಕೃತಿಕ ವಿಕೋಪ ಕೇಂದ್ರ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News