ರೊನಾಲ್ಡೊ, ಮೆಸ್ಸಿ ಜೊತೆ ಭಾರತದ ಸುನಿಲ್ ಛೆಟ್ರಿ: ರೂನಿಯನ್ನು ಹಿಂದಿಕ್ಕಿದ ಭಾರತದ ಫುಟ್ಬಾಲ್ ನಾಯಕ

Update: 2017-06-15 15:49 GMT

ಬೆಂಗಳೂರು,ಜೂ.15: ಭಾರತದ ಫುಟ್ಬಾಲ್ ತಂಡದ ನಾಯಕ ಸುನೀಲ್ ಚೆಟ್ರಿ ಇಂಗ್ಲೆಂಡ್‌ನ ವೇಯ್ನೆ ರೂನಿ ಅವರ ಗೋಲು ದಾಖಲೆಯನ್ನು ಮುರಿದು ವಿಶ್ವದ ನಾಲ್ಕನೆ ಶ್ರೇಷ್ಠ ಸಕ್ರಿಯ ಫುಟ್ಬಾಲ್ ಆಟಗಾರನೆಂಬ ಕೀರ್ತಿಗೆ ಭಾಜನರಾದರು.

54ನೆ ಅಂತಾರಾಷ್ಟ್ರೀಯ ಗೋಲನ್ನು ಬಾರಿಸಿದ ಚೆಟ್ರಿ ಅವರು ರೂನಿ (53 ಗೋಲು)ಅವರ ಗೋಲು ದಾಖಲೆಯನ್ನು ಮುರಿದರು. ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ಮಂಗಳವಾರ ರಾತ್ರಿ ನಡೆದಿದ್ದ ಕಿರ್ಗಿಝ್ ರಿಪಬ್ಲಿಕ್ ತಂಡದ ವಿರುದ್ಧ ನಡೆದ ಎಎಫ್‌ಸಿ ಏಷ್ಯನ್ ಅರ್ಹತಾ ಸುತ್ತಿನ ಪಂದ್ಯದಲ್ಲಿ 69ನೆ ನಿಮಿಷದಲ್ಲಿ ಗೋಲು ಬಾರಿಸಿದ್ದ ಚೆಟ್ರಿ ಈ ದಾಖಲೆ ನಿರ್ಮಿಸಿದ್ದರು. ಚೆಟ್ರಿ ಬಾರಿಸಿದ ಏಕೈಕ ಗೋಲಿನ ನೆರವಿನಿಂದ ಭಾರತ 1-0 ಅಂತರದಿಂದ ಜಯ ಸಾಧಿಸಿತ್ತು.

 ಚೆಟ್ರಿ ಆಡಿದ ಪಂದ್ಯ ಹಾಗೂ ಬಾರಿಸಿದ ಗೋಲಿನ ಅನುಪಾತ 0.57. ಇದು ಪೋರ್ಚುಗಲ್‌ನ ನಾಯಕ ಕ್ರಿಸ್ಟಿಯಾನೊ ರೊನಾಲ್ಡೊ ಹಾಗೂ ಅರ್ಜೆಂಟೀನದ ನಾಯಕ ಲಿಯೊನೆಲ್ ಮೆಸ್ಸಿ ಸಾಧಿಸಿರುವ ಅನುಪಾತಕ್ಕಿಂತ ಉತ್ತಮವಾಗಿದೆ ಎನ್ನುವುದು ಇಲ್ಲಿ ಉಲ್ಲೇಖನೀಯ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News