ಪಾಕಿಸ್ತಾನದ ವಿಶೇಷ ಅತಿಥಿಯೊಂದಿಗೆ ಧೋನಿ

Update: 2017-06-18 06:58 GMT

ಹೊಸದಿಲ್ಲಿ, ಜೂ.18: ಕ್ರೀಡೆಯನ್ನು ಕ್ರೀಡಾಮನೋಭಾವದಿಂದ ಸ್ವೀಕರಿಸಿ ಕ್ರೀಡೆಯಲ್ಲಿ ಯಾವತ್ತೂ ಸೇಡಿಗೆ ಜಾಗವಿಲ್ಲ  ಎಂದು  ನಾಲ್ಕು ವರ್ಷಗಳ ಹಿಂದೆ ಆಸ್ಟ್ರೇಲಿಯ ವಿರುದ್ಧ ಭಾರತ ಮೊಹಾಲಿ ಟೆಸ್ಟ್‌ನಲ್ಲಿ ಜಯ ಗಳಿಸಿದಾಗ ಆಗ ಟೀಮ್‌ ಇಂಡಿಯಾ ನಾಯಕ ನಾಯಕರಾಗಿದ್ದ ಮಹೇಂದ್ರ ಸಿಂಗ್‌ ಧೋನಿ ಪ್ರತಿಕ್ರಿಯೆ ನೀಡಿದ್ದರು. ಅವರ ತನ್ನ  ಮಾತನ್ನು ಮತ್ತೆ ನೆನಪಿಸಿಕೊಂಡಿದ್ದಾರೆ.
 ಧೋನಿ ಪಾಕಿಸ್ತಾನ ತಂಡದ ನಾಯಕ ಸರ್ಫರಾಝ್‌ ಅಹ್ಮದ್  ಮಗ ಅಬ್ದುಲ್ಲ  ಜೊತೆ ಜೊತೆ ಕಾಣಿಸಿಕೊಂಡ ಫೋಟೊ ಇದೀಗ ಸಾಮಾಜಿಕ ಜಾಲಾ ತಾಣಗಳಲ್ಲಿ ವೈರಲ್ ಆಗಿದೆ.

 ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್‌ ತಂಡಗಳ ನಡುವೆ ಇಂದು ಸಂಜೆ ಓವಲ್ ನಲ್ಲಿ ನಡೆಯಲಿರುವ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಫೈನಲ್‌ ಪಂದ್ಯಕ್ಕಾಗಿ ಕ್ಷಣಗಣನೆ  ಆರಂಭಗೊಂಡಿದ್ದು,  ಭಾರತದ ಕ್ರಿಕೆಟ್‌ ಅಭಿಮಾನಿಗಳು ಭಾರತ ಗೆಲ್ಲಲಿ ಎಂದು ಹಾರೈಸುತ್ತಿದ್ದಾರೆ.   ಹೈವೋಲ್ಟೇಜ್‌  ಪಂದ್ಯದ ಸಂದರ್ಭದಲ್ಲಿ   ಟೀಮ್‌ ಇಂಡಿಯಾ ನಾಯಕ ಮಹೇಂದ್ರ ಸಿಂಗ್‌ ಧೋನಿಯ ಈ ರೀತಿಯ ನಡೆ ಹೆಚ್ಚಿನ ಮಹತ್ವ ಪಡೆದಿದೆ.
ಹೈ ಪ್ರೋಫೈಲ್‌  ಪಂದ್ಯವನ್ನು ಕ್ರಿಕೆಟ್‌ ಅಭಿಮಾನಿಗಳು ಎದುರು ನೋಡುತ್ತಿದ್ದಾರೆ. ಪಂದ್ಯದ ಎಲ್ಲ ಟಿಕೆಟ್‌ಗಳು ಮಾರಾಟವಾಗಿದೆ. ಮೂಲಗಳ ಪ್ರಕಾರ  24,500 ಟಿಕೆಟ್‌ಗಳು ಖಾಲಿಯಾಗಿದೆ.
ಧೋನಿಗೆ ಕಳೆದ ಎರಡು ಪಂದ್ಯಗಳಲ್ಲಿ ಆಡಲು ಅವಕಾಶ ಸಿಕ್ಕಿರಲಿಲ್ಲ.ಶ್ರೀಲಂಕಾ ವಿರುದ್ಧ 52ಎಸೆತಗಳಲ್ಲಿ 63ರನ್‌ ಸಿಡಿಸಿದ್ದರು.ಪಾಕಿಸ್ತಾನದ ವಿರುದ್ಧ ಅವರು ಅದೇ ಪ್ರದರ್ಶನ ಮುಂದುವರಿಸುವ ಸಾಧ್ಯತೆ ಇದೆ.ಕಳೆದ ಆವೃತ್ತಿಯಲ್ಲಿ ಧೋನಿ ನಾಯಕರಾಗಿ ಚಾಂಪಿಯನ್ಸ್ ಟ್ರೋಫಿ ಎತ್ತಿದ್ದರು.ಬಳಿಕ ಅವರು ನಾಯಕತ್ವಕ್ಕೆ ರಾಜೀನಾಮೆ ನೀಡಿ ಒತ್ತಡದಿಂದ ಪಾರಾಗಿದ್ದಾರೆ.
ಭಾರತ ಜೂ.4ರಂದು ಪಾಕ್‌ ವಿರುದ್ಧ 124 ರನ್‌ಗಳ ಜಯ ಗಳಿಸಿತ್ತು. ಶ್ರೀಲಂಕಾ ವಿರುದ್ಧ ಭಾರತ ಸೋಲು ಅನುಭವಿಸಿತ್ತು.ಮೂರನೆ ಪಂದ್ಯದಲ್ಲಿ ದಕ್ಷಿಣ ಆಫ್ರಿಕ ವಿರುದ್ಧ ಭಾರತ ಜಯ ಗಳಿಸಿ ಸೆಮಿಫೈನಲ್‌ ತಲುಪಿತ್ತು. ಸೆಮಿಫೈನಲ್‌ನಲ್ಲಿ ಭಾರತವು ಬಾಂಗ್ಲಾ ವಿರುದ್ಧ ಭರ್ಜರಿ ಗೆಲುವೊಂದಿಗೆ ಫೈನಲ್ ತಲುಪಿ ಪಾಕ್‌ನ್ನು ಬಗ್ಗು ಬಡಿಯಲು ಇದೀಗ ತಯಾರಿ ನಡೆಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News