ಭೂಮಿಯಂತಹ 10 ಉಪಗ್ರಹಗಳು ಪತ್ತೆ!

Update: 2017-06-20 08:37 GMT

ವಾಷಿಂಗ್ಟನ್, ಜೂ.20: ನಾಸಾದ ಖಗೋಳಶಾಸ್ತ್ರಜ್ಞರು ಕೆಪ್ಲರ್ ಸ್ಪೇಸ್ ಟೆಲಿಸ್ಕೋಪ್ ಮುಖಾಂತರ 10 ಭೂಮಿಯಂಥದ್ದೇ ಸಣ್ಣ ಗ್ರಹಗಳ ಸಹಿತ 21 ಸಂಭಾವ್ಯ ಹೊಸ ಎಕ್ಸೊ ಗ್ರಹಗಳನ್ನು ಪತ್ತೆ ಹಚ್ಚಿದ್ದಾರೆ.

ಕೆಪ್ಲರ್ ಮಿಷನ್ನಿನ ಪ್ರಥಮ ಹಂತದ ಅಂಗವಾಗಿ ಸಿಗ್ನಸ್ ನಕ್ಷತ್ರಪುಂಜದಲ್ಲಿ ಸುಮಾರು 2 ಲಕ್ಷ ನಕ್ಷತ್ರಗಳನ್ನು ಪರಿಶೀಲಿಸಿದ ನಂತರ ಈ ಗ್ರಹಗಳು ಪತ್ತೆಯಾಗಿವೆ.

ಕೆಪ್ಲರ್ ಸ್ಪೇಸ್ ಟೆಲಿಸ್ಕೋಪ್ ಅನ್ನು ಕಕ್ಷೆಗೆ 2009ರಲ್ಲಿ ಬಿಡಲಾಗಿತ್ತು. ಮೊದಲ ನಾಲ್ಕು ವರ್ಷಗಳಲ್ಲಿ ಕೆಪ್ಲರ್ ಆಗಸದ ಕೇವಲ ಶೇ.025 ಸ್ಥಳಗಳ ಸಮೀಕ್ಷೆ ನಡೆಸಿತ್ತು. ನಾಸಾ ಪ್ರಕಾರ ಇನ್ನೂ 100ರಿಂದ 200 ಭೂಮಿ ತರಹದ ಗ್ರಹಗಳು ಕೆಪ್ಲರ್ ಕೈಗೆ ನಿಲುಕದೇ ಇದ್ದಿರಬಹುದು.
ಇಲ್ಲಿಯ ತನಕ ಕೆಪ್ಲರ್ ಗುರುತಿಸಿದ 4,034 ಅಂತರಿಕ್ಷ ವಸ್ತುಗಳಲ್ಲಿ ಅರ್ಧಕ್ಕಿಂತಲೂ ಹೆಚ್ಚು ಎಕ್ಸೋ ಗ್ರಹಗಳೆಂದು ಗುರುತಿಸಲ್ಪಟ್ಟಿವೆ.

ಕೆಪ್ಲರ್ ಗುರುತಿಸಿರುವ ಗ್ರಹಗಳಲ್ಲೊಂದಾದ ಕೆಒಐ 7711 ಭೂಮಿಯ ಅವಳಿಯಂತಿದೆಯೆಂದು ಹೇಳಲಾಗುತ್ತಿದೆಯಲ್ಲದೆ ಭೂಮಿಗಿಂತ 30 ಪಟ್ಟು ದೊಡ್ಡದಿರಬಹುದೆಂದೂ ಅಂದಾಜಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News