ಕವಿ ಸಮ್ಮೇಳನಕ್ಕೆ ಕವಿಗಳಿಗೆ ಆಹ್ವಾನ

Update: 2017-06-21 13:00 GMT

ಬೆಂಗಳೂರು, ಜೂ.21: ಭಾರತರತ್ನ ಸರ್.ಎಂ.ವಿಶ್ವೇಶ್ವರಯ್ಯ ಎಂಜಿನಿಯರಿಂಗ್ ಪ್ರತಿಷ್ಠಾನ ಟ್ರಸ್ಟ್‌ನಿಂದ ಜು.24 ಹಾಗೂ 25 ರಂದು ನಗರದ ಮಲ್ಲತ್ತಹಳ್ಳಿಯಲ್ಲಿರುವ ಕಲಾಗ್ರಾಮದಲಿ ಅಖಂಡ ಕರ್ನಾಟಕ 5ನೆ ಕವಿ ಸಮ್ಮೇಳನ ಹಾಗೂ ಕಾವ್ಯ ಕಮ್ಮಟ ಹಮ್ಮಿಕೊಳ್ಳಲಾಗಿದೆ. ಸಮ್ಮೇಳನದಲ್ಲಿ ಕರ್ನಾಟಕ ಪರಂಪರೆ ಜಾನಪದ ಲೋಕೋತ್ಸವ ಕಾರ್ಯಕ್ರಮ ನಡೆಯಲಿದೆ.

ಕವನ ರಚನೆ, ಉಪನ್ಯಾಸ, ವಿಚಾರ ಸಂಕಿರಣ ಹಾಗೂ ಕಾವ್ಯವಾಚನ ನಡೆಯುತ್ತದೆ. ಅಲ್ಲದೆ, ಸಮೂಹ ಗಾಯನ ಜಾನಪದ ಗಾಯನ, ವೈಯುಕ್ತಿಕ ಜಾನಪದ ಗಾಯನಕ್ಕೂ ಅವಕಾಶವಿದೆ. ಉತ್ತರ ಕರ್ನಾಟಕದ 11 ಜಿಲ್ಲೆಗಳ 300 ಕ್ಕೂ ಅಧಿಕ ಕಲಾವಿದರು, 50 ಕ್ಕೂ ಹೆಚ್ಚು ಕವಿಗಳು, ನೃತ್ಯ ತಂಡಗಳು ಭಾಗವಹಿಸುತ್ತವೆ. ಇದೇ ವೇಳೆ 2016ರಲ್ಲಿ ನಡೆದ ಕವಿ ಸಮ್ಮೇಳನದ ನೂರು ಕವಿತೆಗಳ ಕವನ ಸಂಕಲನ ಬಿಡುಗಡೆಯಾಗಲಿದೆ.

 ಒಂದು ಕವಿತೆ ಅಥವಾ 5 ಚುಟುಕುಗಳನ್ನು ಓದಲು ಸಮ್ಮೇಳನದಲ್ಲಿ ಅವಕಾಶವಿದೆ. ಅಲ್ಲದೆ, ಮುಂದಿನ 2018 ರಲ್ಲಿ ಪ್ರಕಟಿಸಿರುವ ಕವನ ಸಂಕಲನಕ್ಕೆ 5 ಕವಿತೆ ಅಥವಾ 20 ಚುಟುಕು ಪದ್ಯಗಳನ್ನು ನೀಡಬೇಕಾಗುತ್ತದೆ. ಕವಿತೆ ಅಥವಾ ಚುಟುಕು ಕವಿತೆಗಳನ್ನು ನುಡಿ ಫೈಲ್‌ನಲ್ಲಿ ಡಿಟಿಪಿ ಮಾಡಿಸಿ, ಮುದ್ರಣ ದೋಷಗಳನ್ನು ತಿದ್ದಿ ಈ ವಿಳಾಸಕ್ಕೆ ಈ ಮೇಲ್ ಕಳಿಸಬೇಕು ಎಂದು ಪ್ರಕಟನೆ ತಿಳಿಸಿದೆ.

ಕವಿ ಸಮ್ಮೇಳನದಲ್ಲಿ ಭಾಗವಹಿಸುವವರು ನಿಗದಿತ ಅರ್ಜಿ ನಮೂನೆಯನ್ನು ಭಾರತರತ್ನ ಸರ್.ಎಂ.ವಿಶ್ವೇಶ್ವರಯ್ಯ ಎಂಜಿನಿಯರಿಂಗ್ ಪ್ರತಿಷ್ಠಾನ ಟ್ರಸ್ಟ್(ರಿ), ನಂ. 468, 13 ನೆ ಕ್ರಾಸ್, 3 ನೆ ಹಂತ, ಮಂಜುನಾಥ ನಗರ, ಬೆಂಗಳೂರು-560010 ಇಲ್ಲಿಂದ ಪಡೆದು ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ 98453 07327 ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News