ಮಹಿಳೆ ಸಾವು: ವೈದ್ಯರ ನಿರ್ಲಕ್ಷ ಆರೋಪ
Update: 2017-06-28 17:54 IST
ಬೆಂಗಳೂರು, ಜೂ.28: ಮಹಿಳೆಯೊಬ್ಬರು ವೈದ್ಯರ ನಿರ್ಲಕ್ಷದಿಂದ ಸಾವನ್ನಪ್ಪಿದ್ದಾರೆ ಎಂದು ಆರೋಪಿಸಿ ಪ್ರತಿಷ್ಠಿತ ಆಸ್ಪತ್ರೆಯೊಂದರ ವಿರುದ್ಧ ಸದಾಶಿವನಗರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಸದಾಶಿವನಗರದ ಪಾರ್ವತಮ್ಮ(59) ಎಂಬುವರು ಮೃತಪಟ್ಟಿದ್ದು, ಅವರ ಮಗ ಹರೀಶ್ ದೂರು ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದ ಪಾರ್ವತಮ್ಮರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಪಾರ್ವತಮ್ಮ ಮೃತಪಟ್ಟು ಒಂದು ದಿನ ಕಳೆದರೂ ಮಾಹಿತಿ ನೀಡದೆ, ಸರ್ಜರಿ ಮಾಡಬೇಕೆಂಬ ನೆಪ ಹೇಳಿ 5 ಲಕ್ಷ ಹಣ ಪಡೆದು ನಂತರ ಮೃತಪಟ್ಟಿದ್ದಾಗಿ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.
ಮುಂದಿನ ವಾರ ವಿದೇಶಕ್ಕೆ ಹೋಗುವುದರಿಂದ ಒಂದು ವಾರದೊಳಗೆ ಸರ್ಜರಿ ಮಾಡಿಸಿ ಎಂದು ವೈದ್ಯರೊಬ್ಬರು ಬಲವಂತವಾಗಿ ಶಸ್ತ್ರ ಚಿಕಿತ್ಸೆ ಮಾಡಿಸಿದ್ದಾರೆ ಎಂದು ಪಾರ್ವತಮ್ಮ ಅವರ ಪುತ್ರ ಹರೀಶ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.