×
Ad

ವಂಚನೆ ಪ್ರಕರಣ: ನಟ ಶ್ರೀನಿವಾಸ್ ವಿಚಾರಣೆ

Update: 2017-06-28 18:04 IST

ಬೆಂಗಳೂರು, ಜೂ.28: ಉದ್ಯಮಿಯೋರ್ವನಿಗೆ ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳು ನಟ ಮತ್ತು ನಿರ್ದೇಶಕ ಎಸ್.ಶ್ರೀನಿವಾಸ್‌ನನ್ನು ಹೆಚ್ಚಿನ ವಿಚಾರಣೆಗಾಗಿ ಪೊಲೀಸರು ಬೆಂಗಳೂರಿಗೆ ಕರೆತಂದಿದ್ದಾರೆ.

2013ರಲ್ಲಿ ವಸಂತನಗರದ ಮಸ್ರೂರ್ ಆಲಮ್ ಮತ್ತು ಸಹೋದರ ಸಝ್ಜದ್ ಆಲಮ್ ಅವರಿಗೆ ಶ್ರೀನಿವಾಸ್ ಅವರು, ಖಾಸಗಿ ಬ್ಯಾಂಕಿನಲ್ಲಿ 30 ಕೋಟಿ ಸಾಲ ಕೊಡಿಸುವುದಾಗಿ ನಂಬಿಸಿ 1 ಕೋಟಿ ರೂ. ಮುಂಗಡ ಹಣ ಪಡೆದಿದ್ದರು. ಈ ಸಂಬಂಧ ಆಲಮ್ ಸಹೋದರರು ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಆದರೆ, ಶ್ರೀನಿವಾಸ್ ವಿಚಾರಣೆಗೆ ಗೈರಾಗುತ್ತಿದ್ದ ಹಿನ್ನೆಲೆಯಲ್ಲಿ 4ನೆ ಹೆಚ್ಚುವರಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಅವರ ವಿರುದ್ಧ ವಾರಂಟ್ ಜಾರಿ ಮಾಡಿತ್ತು. ವಂಚನೆ ಪ್ರಕರಣವೊಂದರಲ್ಲಿ ಬಂಧಿಸಲಾಗಿದ್ದ ಶ್ರೀನಿವಾಸ್ ತಿಹಾರ್ ಜೈಲಿನಲ್ಲಿದ್ದರು. ನ್ಯಾಯಾಲಯದ ಸೂಚನೆಯ ಮೇರೆಗೆ ಅವರನ್ನು ನಗರಕ್ಕೆ ಕರೆತರಲಾಗಿದೆ.
ಶ್ರೀನಿವಾಸ್ ವಿರುದ್ಧ ಸುಮಾರು 8 ವಂಚನೆ ಪ್ರಕರಣ ದಾಖಲಾಗಿದೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News