ವಿದ್ಯಾರ್ಥಿಗಳಿಗೆ ಛತ್ರಿ ವಿತರಣೆ
ಬೆಂಗಳೂರು,ಜೂ.29: ದಕ್ಷಿಣ ಕನ್ನಡ ಜಿಲ್ಲೆಯ ಬೋಳಂತೂರು ಸರಕಾರಿ ಶಾಲೆಯ ಬಡ ವಿದ್ಯಾರ್ಥಿಗಳಿಗೆ ಮಲ್ಲೇಶ್ವರಂನ ರಮಾನಾಥ ರೈ ಅಭಿಮಾನಿ ಬಳಗದ ವತಿಯಿಂದ ಉಚಿತ ಛತ್ರಿಗಳನ್ನು ಗುರುವಾರ ವಿತರಿಸಲಾಯಿತು.
ಛತ್ರಿಗಳನ್ನು ವಿತರಿಸಿದ ಬಳಿಕ ತಾಲೂಕು ಪಂಚಾಯತ್ ಉಪಾಧ್ಯಕ್ಷ ಬಿ.ಎಂ ಅಬಾಸ್ ಅಲಿ ಮಾತನಾಡಿ, ಸಮಾಜದ ಸಹಭಾಗಿತ್ವದೊಂದಿಗೆ ಸರಕಾರಿ ಶಾಲೆಗಳ ಅಭಿವೃದ್ಧಿ ಪಥದತ್ತ ಮುನ್ನಡೆಯಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಸರಕಾರಿ ಶಾಲೆಗಳ ಬಡ ವಿದ್ಯಾರ್ಥಿಗಳಿಗೆ ನೆರವಿಗೆ ಸಂಘ ಸಂಸ್ಥೆಗಳು ಮುಂದಾಗುತ್ತಿರುವುದು ಆಶಾದಾಯಕ ಬೆಳವಣಿಗೆ. ಈ ಕಾರ್ಯಕ್ರಮವನ್ನು ಇಡಿ ರಾಜ್ಯಾದ್ಯಂತ ವಿಸ್ತರಿಸಬೇಕು ಎಂದು ತಿಳಿಸಿದರು.
ಈ ವೇಳೆ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಇಸ್ಮಾಯಿಲ್, ಗ್ರಾ.ಪಂ. ಉಪಾಧ್ಯಕ್ಷ ಚಂದ್ರಶೇಖರ ರೈ, ಗ್ರಾಮ ಪಂಚಾಯತ್ ಸದಸ್ಯ ಯಾಕೂಬ್ ದಂಡೆಮಾರ್, ಅಭಿಮಾನಿ ಬಳಗದ ಅಧ್ಯಕ್ಷ ಹಮೀದ್ ಬೋಳಂತೂರು, ಪ್ರಧಾನ ಕಾರ್ಯದರ್ಶಿ ಬಶೀರ್ ಬೋಳಂತೂರು, ಕಾರ್ಯದರ್ಶಿ ಶಫಿಕ್ ಬೋಳಂತೂರು, ಮುಖ್ಯ ಸಲಹೆಗಾರ ಅಶ್ರಫ್ ಬೋಳಂತೂರು, ಸಂಘಟನಾ ಕಾರ್ಯದರ್ಶಿ ಯಾಕೂಬ್ ನಾರನ್ಕೋಡಿ, ಸದಸ್ಯರಾದ ಸಲೀಂ ಬೋಳಂತೂರು, ನಾಸಿರ್ ಬೋಳಂತೂರು ಸೇರಿದಂತೆ ಇತರರು ಇದ್ದರು.