×
Ad

ಬಿ.ಕಾಂ. ಪಠ್ಯದಲ್ಲಿ ಜಿಎಸ್ ಟಿ ವಿಷಯ ಸೇರ್ಪಡೆಗೊಳಿಸಿದ ಕರ್ನಾಟಕದ ವಿವಿ

Update: 2017-06-30 17:33 IST

ಬೆಂಗಳೂರು, ಜೂ.30: ಜಿಎಸ್ ಟಿ ಜಾರಿಗೆ ಕೇಂದ್ರ ಸರಕಾರ ಸಿದ್ಧವಾಗಿರುವಂತೆ ಬೆಳಗಾವಿಯ ರಾಣಿ ಚೆನ್ನಮ್ಮ ವಿವಿ ಹೊಸ ತೆರಿಗೆ ನೀತಿಗೆ ಸಂಬಂಧಿಸಿ ಕೋರ್ಸ್ ಒಂದನ್ನು ಆರಂಭಿಸಿದೆ.

“ವಿವಿ ನಡೆಸುತ್ತಿರುವ ಬಿ.ಕಾಂ. ಕೋರ್ಸ್ ನಲ್ಲಿ ನೇರ ತೆರಿಗೆ ಹಾಗೂ ಪರೋಕ್ಷ ತೆರಿಗೆಯ ಬಗ್ಗೆ ಈಗಾಗಲೇ ವಿಷಯಗಳಿವೆ. ಈಗ ಸಿಲೆಬಸ್ ಅನ್ನು ಬದಲಾವಣೆ ಮಾಡಲಾಗಿದ್ದು. ಜಿಎಸ್ ಟಿಯನ್ನು ಇದರಲ್ಲಿ ಸೇರಿಸಲಾಗಿದೆ” ಎಂದು ವಿವಿಯ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಪ್ರಸ್ತುತ ಶೈಕ್ಷಣಿಕ ಅವಧಿಯಿಂದ ಮಾತ್ರ ಜಿಎಸ್ ಟಿ ಬಗ್ಗೆ ಕಲಿಸಲಾಗುವುದು. ಬಿ ಕಾಂ 3ನೆ ವರ್ಷದಲ್ಲಿ ಜಿಎಸ್ ಟಿ-1 ಹಾಗೂ ಜಿಎಸ್ ಟಿ-2 ಕಡ್ಡಾಯ ವಿಷಯವಾಗಿದೆ ಎಂದವರು ಹೇಳಿದ್ದಾರೆ.

“ಏಕ ತೆರಿಗೆ ವ್ಯವಸ್ಥೆಯ ಬಗ್ಗೆ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಲಾಗುವುದು. ಇದರಿಂದ ಅವರ ಭವಿಷ್ಯದಲ್ಲಿ ಸಹಾಯಕವಾಗಲಿದೆ. ಈ ವಿಷಯಕ್ಕೆ ಸಂಬಂಧಿಸಿ ಉಪನ್ಯಾಸಕರಿಗೆ ವಿಶೇಷ ತರಬೇತಿ ನೀಡಲಾಗಿದೆ” ಎಂದು ವಿವಿಯ ಚಾನ್ಸಲರ್ ಶಿವಾನಂದ ಹೊಸಮನಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News