ರೋಟರಿ ಗೌವರ್ನರ್ ಆಗಿ ಆಶಾ ಅಧಿಕಾರ ಸ್ವೀಕಾರ
Update: 2017-07-01 17:48 IST
ಬೆಂಗಳೂರು, ಜು.1: ರೋಟರಿ ಜಿಲ್ಲೆ 3190ರ ಜಿಲ್ಲಾ ಗೌವರ್ನರ್ ಆಗಿ ತುಮಕೂರು ಈಸ್ಟ್ ಕ್ಲಬ್‌ನ ರೊಟೇರಿಯನ್ ಆಶಾ ಪ್ರಸನ್ನ ಕುಮಾರ್ ಅಧಿಕಾರ ಸ್ವೀಕರಿಸಿದರು.
ನಗರದಲ್ಲಿಂದು ನಡೆದ ಕಾರ್ಯಕ್ರಮದಲ್ಲಿ ಅಧಿಕಾರ ಸ್ವೀಕರಿಸಿ ಮಾತನಾಡಿದ ಆಶಾ ಪ್ರಸನ್ನ ಕುಮಾರ್, ಹಲವು ದಶಕಗಳಿಂದ ಸಮಾಜ ಸೇವಾ ಕಾರ್ಯದಲ್ಲಿ ತೊಡಗಿರುವ ರೋಟರಿ ಸಂಸ್ಥೆಯ ಉನ್ನತ ಸ್ಥಾನ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಸಂಸ್ಥೆ ಇದುವರೆಗೂ ಮುನ್ನಡೆಸಿಕೊಂಡು ಬಂದಿರುವ ಸಮಾಜಮುಖಿ ಕೆಲಸಗಳನ್ನು ಮುಂದಕ್ಕೆ ಕೊಂಡೊಯ್ಯಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.
ಈ ವೇಳೆ ರೋಟರಿ ಇಂಟರ್‌ನ್ಯಾಷನಲ್‌ನ ನಿರ್ದೇಶಕ ಭಾಸ್ಕರ್ ಚೊಕ್ಕಲಿಂಗಂ ಆಶಾ ಪ್ರಸನ್ನಕುಮಾರ್ ಅವರಿಗೆ ಪ್ರಮಾಣ ವಚನ ಬೋಧಿಸಿದರು. ಕಾರ್ಯಕ್ರಮದಲ್ಲಿ ಬ್ರಿಟಾನಿಯಾ ಇಂಡಸ್ಟ್ರೀಸ್‌ನ ಮಾಜಿ ವ್ಯವಸ್ಥಾಪಕ ನಿರ್ದೇಶಕಿ ನಿತಾ ಬಾಲಿ, ಡಾ.ಎಂ.ಕೆ. ಪಾಂಡುರಂಗಶೆಟ್ಟಿ, ರೋಟರಿಯನ್ ಎಚ್.ಜಿ.ಚಂದ್ರಶೇಖರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.