×
Ad

ಜು.21ರಿಂದ ಮಕ್ಕಳಿಗಾಗಿ ಕಥೆ ಹೇಳುವ ಕಾರ್ಯಕ್ರಮ

Update: 2017-07-01 20:10 IST

ಬೆಂಗಳೂರು, ಜು.1: ಯೂಥ್ ಫಾರ್ ಸೇವಾ ಸಂಸ್ಥೆಯು ‘ಕಥೆ ಮಯ’ ಕಥೆ ಹೇಳುವ ಅಭಿಯಾನವನ್ನು ಮಕ್ಕಳಿಗಾಗಿ ಜು.21 ರಿಂದ 23ರವರೆಗೆ ಆಯೋಜಿಸಿದೆ. ಈ ಅಭಿಯಾನದಲ್ಲಿ 10 ಸಾವಿರ ಸ್ವಯಂಸೇವಕರು, 1 ಲಕ್ಷ ಮಕ್ಕಳಿಗೆ ಕಥೆ ಹೇಳುತ್ತಾರೆ.
ಶಾಲೆಗಳಿಗೆ, ನಿರ್ಗತಿಕರಿಗೆ ಆಶ್ರಯಗಳಿಗೆ, ಸರಕಾರಿ ಶಾಲೆಗಳಿಗೆ ಮತ್ತು ಇನ್ನಿತರ ಸಂಘ ಸಂಸ್ಥೆಗಳಿಗೆ, ಸಾಮಾಜಿಕ ವಲಯಗಳಿಂದ ಸ್ವಯಂ ಸೇವಕರು ಒಟ್ಟುಗೂಡಿಸಿ ಸವಾಲುಗಳನ್ನು ಎದುರಿಸಲು ಸಹಾಯ ಮಾಡುತ್ತಿದೆ. ಈ ಸಂಸ್ಥೆಯು 10 ವರ್ಷ ಯಶಸ್ವಿಯಾಗಿ ಪೂರ್ಣಗೊಳಿಸಿರುವುದರಿಂದ ‘ಕಥೆ ಹೇಳುವ ಕಾರ್ಯಕ್ರಮ’ ಆಯೋಜಿಸಿದೆ.

ಶಾಲಾ ಮಕ್ಕಳು ಯಾವುದೇ ಸಂದರ್ಭದಲ್ಲಿಯೂ ಅವರ ಗುರಿಯ ಮೇಲಿರುವ ಭರವಸೆಯನ್ನು ಕಳೆದುಕೊಳ್ಳಬಾರದೆಂಬ ಜಾಗೃತಿಯನ್ನು ಈ ಕಥೆಯ ಮೂಲಕ ಮೂಡಿಸುತ್ತಿದ್ದೇವೆ. ನಾವು ಒರಿಸ್ಸಾದ ಚಿತ್ರ ಕಲಾವಿದ ‘ಮಹಕನಂದಿ’ ಅವರ ಕಥೆಯನ್ನು ಪ್ರಸ್ತುತಪಡಿಸುತ್ತಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ವೆಬ್‌ಸೈಟ್-www.youthforseva.org, ಇಮೇಲ್-contact@youthforseva.org ಹಾಗೂ ಸಹಾಯವಾಣಿ 7259958595ಗೆ ಸಂಪರ್ಕಿಸಬಹುದಾಗಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News