“ಏರ್ ಇಂಡಿಯಾ” ವಿಮಾನದಲ್ಲಿ ಕೈಕೊಟ್ಟ “ಏರ್ ಕಂಡಿಶನ್”

Update: 2017-07-03 07:47 GMT

ಹೊಸದಿಲ್ಲಿ, ಜು.3: ದಿಲ್ಲಿ ಮೂಲದ ಏರ್ ಇಂಡಿಯಾ ವಿಮಾನದಲ್ಲಿ ಏರ್ ಕಂಡಿಶನಿಂಗ್ ವ್ಯವಸ್ಥೆ ಕೈಕೊಟ್ಟ ಪರಿಣಾಮ ಆಕ್ರೋಶಗೊಂಡ ಪ್ರಯಾಣಿಕರು ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಘಟನೆಯ ವಿಡಿಯೋ ವೈರಲ್ ಆಗಿದ್ದು, ಪ್ರಯಾಣಿಕರು ವಿಮಾನದ ಸಿಬ್ಬಂದಿಯಲ್ಲಿ ಈ ಬಗ್ಗೆ ದೂರುತ್ತಿರುವುದು ಹಾಗೂ  ಕೆಲ ಪ್ರಯಾಣಿಕರು ಸೆಖೆ ತಡೆಯಲಾರದೆ ವಿಮಾನದಲ್ಲಿದ್ದ ಮ್ಯಾಗಝಿನ್ ಗಳು ಹಾಗೂ ವಿಮಾನ ಸುರಕ್ಷತಾ ಕಾರ್ಡ್ ಗಳಿಂದ ಗಾಳಿ ಬೀಸುತ್ತಿರುವ ದೃಶ್ಯಗಳು ವಿಡಿಯೋದಲ್ಲಿದೆ.

ಕೆಲ ಸಮಯದಲ್ಲೇ ಏರ್ ಕಂಡಿಶನಿಂಗ್ ಸರಿಯಾಗಲಿದೆ ಎಂದು ಸಿಬ್ಬಂದಿ ಪ್ರಯಾಣಿಕರಿಗೆ ಭರವಸೆ ನೀಡಿದ್ದರೇ ಹೊರತು ಯಾವುದೇ ಪ್ರಯೋಜನವಾಗಿರಲಿಲ್ಲ ಎನ್ನಲಾಗಿದೆ.

6 ಗಂಟೆಗೆ ಬಗ್ದೋಗ್ರಾದಿಂದ ಹೊರಟಿದ್ದ ವಿಮಾನ ದಿಲ್ಲಿಗೆ ಸರಿಯಾದ ಸಮಯಕ್ಕೆ ತಲುಪಿದೆ. ಏರ್ ಕಂಡಿಶನ್ ಕೆಲಸ ಮಾಡುತ್ತಿಲ್ಲ ಎಂದು ಪ್ರಯಾಣಿಕರು ದೂರು ನೀಡಿದ್ದು, ಪ್ರತಿಭಟನೆ ನಡೆಸಿದ್ದರು ಎಂದು ಏರ್ ಇಂಡಿಯಾ ವಕ್ತಾರ ಮಾಹಿತಿ ನೀಡಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News