"ಮಿಸೆಸ್ ಮೋದಿ"ಗೆ ಕಾರಿನ ಬಾಗಿಲು ತೆರೆದು ಬೇಸ್ತುಬಿದ್ದ ಅಮೆರಿಕನ್ ಗಾರ್ಡ್ ಗಳು..!

Update: 2017-07-07 11:11 GMT

ಹೊಸದಿಲ್ಲಿ,ಜು.7 :  ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಇತ್ತೀಚೆಗೆನ ಅಮೆರಿಕಾ ಭೇಟಿ ಮಾಧ್ಯಮದಲ್ಲಿ ಸಾಕಷ್ಟು ಸುದ್ದಿ ಮಾಡಿದೆ ನಿಜ. ಆದರೆ ಇದರ ಹೊರತಾಗಿ ಒಂದು ಸಣ್ಣ ವೀಡಿಯೋ ಭಾರೀ ವೈರಲ್ ಆಗಿ ಬಿಟ್ಟಿದೆ. "ಮೋದಿ ಟ್ರಂಪ್‌ ಮೀಟ್" ಎಂಬ ಹ್ಯಾಶ್ ಟ್ಯಾಗ್ ನೊಂದಿಗೆ ಪೋಸ್ಟ್ ಮಾಡಲ್ಪಟ್ಟ ವೀಡಿಯೊ ಸಾಕಷ್ಟು ಕುತೂಹಲ ಕೂಡ ಕೆರಳಿಸಿದೆ.

ಮೋದಿ ಅಮೆರಿಕಾದಲ್ಲಿದ್ದಾಗ ಅವರ ಕಾರಿನ ಬಾಗಿಲನ್ನು ತೆರೆಯಲು ಇಬ್ಬರು ಗಾರ್ಡ್ ಗಳು ಕಾದಿರುವ ಟಿವಿ ದೃಶ್ಯಾವಳಿಯ ವೀಡಿಯೋವೊಂದು ತಮಾಷೆಯ ಚರ್ಚೆಗಳಿಗೆ ಎಡೆ ಮಾಡಿಕೊಟ್ಟಿದೆ.

ಮೋದಿ ಕಾರಿನ ಒಂದು ಬದಿಯಲ್ಲಿದ್ದ ಗಾರ್ಡ್ ಮೋದಿಗೆ ಕಾರಿನ ಬಾಗಿಲು ತೆರೆದರೆ ಇನ್ನೊಂದು ಬದಿಯಲ್ಲಿದ್ದವ ಅಮೆರಿಕಾದ ಫಸ್ಟ್ ಲೇಡಿ ಜತೆಗೂಡಬೇಕಾಗಿದ್ದ ‘‘ಮಿಸೆಸ್ ಮೋದಿ’’ ಕಾರಿನಲ್ಲಿದ್ದಾರೆಂದು ಕಾರಿನ ಇನ್ನೊಂದು ಬದಿಯ ಬಾಗಿಲು ತೆರೆದರೂ ಅಲ್ಲಿಂದ ಯಾರೂ ಇಳಿಯದೇ ಇದ್ದುದರಿಂದ ಆತ ಬೇಸ್ತು ಬೀಳುತ್ತಾನೆ.

ಅಮೆರಿಕಾದಲ್ಲಿ ಮೋದಿ-ಟ್ರಂಪ್ ಆಲಿಂಗನ, ಕೈಕುಲುಕುವಿಕೆಯ ನಡುವೆ ಭಾರತದಲ್ಲಿ ವೈರಲ್ ಆದ ಈ ವೀಡಿಯೋದೊಂದಿಗೆ ಟ್ವಿಟ್ಟರಿನಲ್ಲಿ ಹೀಗೆಂದು ಪೋಸ್ಟ್ ಮಾಡಲಾಗಿದೆ - ‘‘1. ಮೋದಿ ಕಾರ್ ಆಗಮಿಸಿದೆ 2. ಗಾರ್ಡ್ ನಿಂದ ಸೆಲ್ಯೂಟ್ 3. ಮಿಸೆಸ್ ಮೋದಿಗೆ ಬಾಗಿಲು ತೆರೆಯಲಾಗಿದೆ. 4 ಮಿಸೆಸ್ ಮೋದಿ ಇಲ್ಲ.’’ ಪೋಸ್ಟ್ ತಮಾಷೆಯಾಗಿದೆಯಲ್ಲವೇ ?

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News