"ಮಹಿಳೆಯರಿಗೆ ಸ್ಯಾನಿಟರಿ ಪ್ಯಾಡ್ ಬೇಕಾಗಿಲ್ಲ" ಎಂದ ಮಾಳವಿಕಾಗೆ ಮಹಿಳೆಯರಿಂದ ಮಂಗಳಾರತಿ

Update: 2017-07-08 13:29 GMT

ಬೆಂಗಳೂರು, ಜು.8: ಸ್ಯಾನಿಟರಿ ಪ್ಯಾಡ್ ಗಳ ಮೇಲೆ ಜಿಎಸ್ ಟಿ ತೆರಿಗೆ ಹೇರಿರುವ ಕೇಂದ್ರ ಸರಕಾರದ ವಿರುದ್ಧ ಮಹಿಳೆಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ನಡುವೆ ಬಿಜೆಪಿ ನಾಯಕಿ, ನಟಿ ಮಾಳವಿಕಾ ಅವಿನಾಶ್ ಅವರ “ಮಹಿಳೆಯರಿಗೆ ಸ್ಯಾನಿಟರಿ ಪ್ಯಾಡ್ ಗಳು ಬೇಕಾಗಿಲ್ಲ” ಎನ್ನುವ ಹೇಳಿಕೆ ಇದೀಗ ವಿವಾದಕ್ಕೆ ಕಾರಣವಾಗಿದ್ದು. ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.

ಸ್ಯಾನಿಟರಿ ಪ್ಯಾಡ್ ಗಳ ಮೇಲೆ ಸರಕಾರ ವಿಧಿಸಿರುವ ಜಿಎಸ್ ಟಿ ತೆರಿಗೆಯ ಬಗ್ಗೆ ಪತ್ರಿಕೆಯೊಂದಕ್ಕೆ ಪ್ರತಿಕ್ರಿಯಿಸಿದ್ದ  ಅವರು, “ಮುಂದುವರಿದ ರಾಷ್ಟ್ರಗಳಿಗೆ ಬೇಡವಾದ ಸ್ಯಾನಿಟರಿ ಪ್ಯಾಡ್ ಗಳನ್ನು ಬಹುರಾಷ್ಟ್ರೀಯ ಕಂಪೆನಿಗಳು ನಮ್ಮ ಮೇಲೆ ಹೇರುತ್ತಿರುವುದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಕಾಲಕಾಲದಿಂದ ಬಂದ ಬಟ್ಟೆ, ನಮ್ಮ ತಾಯಂದಿರವರೆಗೆ ಎಲ್ಲರೂ ಬಳಸುತ್ತಿದ್ದ ಬಟ್ಟೆ ಎಲ್ಲದಕ್ಕಿಂತ ಹೈಜೀನಿಕ್. ಬಟ್ಟೆ ಪ್ರಾಯೋಗಿಕ ಕಾರಣಗಳಿಂದ ಕಷ್ಟವಾಗಿರುವುದರಿಂದ ಮುಂದುವರಿದ ರಾಷ್ಟ್ರಗಳಂತೆ ನಾವು ಕ್ರಮೇಣ ಟ್ಯಾಂಪೂನ್ ಗಳನ್ನು ಬಳಸುವುದನ್ನು ಅಳವಡಿಸಿಕೊಳ್ಳಬೇಕು. ಪರಂಪರಾಗತವಾಗಿ ಬಂದಿರುವುದೆಲ್ಲಾ ಸರಿಯಲ್ಲ, ಪಾಶ್ಚಾತ್ಯ ದೇಶಗಳಿಂದ ಬರುವುದೆಲ್ಲಾ ಸರಿ ಎಂಬ ತಿಳುವಳಿಕೆ ನಮಗೆ” ಎಂದಿದ್ದರು.

ಈ ಬಗ್ಗೆ ಮಹಿಳೆಯರು ಸೇರಿದಂತೆ ಸಾಮಾಜಿಕ ಜಾಲತಾಣಗಳ ಬಳಕೆದಾರರು ಮಾಳವಿಕಾ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಕೋಟ್ಯಾಂತರ ಮಹಿಳೆಯರ ಅಗತ್ಯವಾದ ಸ್ಯಾನಿಟರಿ ಪ್ಯಾಡನ್ನು ಐಶಾರಾಮಿ ವಸ್ತುವೆಂಬಂತೆ ಮಾಳವಿಕಾ ಹೇಳಿರುವುದು ಸರಿಯಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

Full View Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News