ವಿಂಬಲ್ಡನ್: ರಫೆಲ್ ನಡಾಲ್ , ಮುಗುರುಝಾ ನಾಲ್ಕನೆ ಸುತ್ತಿಗೆ

Update: 2017-07-08 18:40 GMT

ಲಂಡನ್, ಜು. 8: ಎರಡು ಬಾರಿಯ ವಿಂಬಲ್ಡನ್ ಚಾಂಪಿಯನ್ ಸ್ಪೇನ್‌ನ ರಫೆಲ್ ನಡಾಲ್ ಇಲ್ಲಿ ನಡೆಯುತ್ತಿರುವ ವಿಂಬಲ್ಡನ್ ಚಾಂಪಿಯನ್‌ಶಿಪ್‌ನ ಪುರುಷರ ಸಿಂಗಲ್ಸ್‌ನಲ್ಲಿ ನಾಲ್ಕನೆ ಸುತ್ತು ಪ್ರವೇಶಿಸಿದ್ದಾರೆ.

ಶುಕ್ರವಾರ ರಾತ್ರಿ ನಡೆದ ಪಂದ್ಯದಲ್ಲಿ ನಾಲ್ಕನೆ ಶ್ರೇಯಾಂಕದ ನಡಾಲ್ ಅವರು ರಶ್ಯದ ಕರೆನ್ ಖಚನೊವ್ ವಿರುದ್ಧ 6-1,6-4, 7-6(7-3) ಸೆಟ್ ಗಳಿಂದ ಜಯ ಗಳಿಸಿ ನಾಲ್ಕನೆ ಸುತ್ತು ತಲುಪಿದರು.

9ನೇ ಶ್ರೇಯಾಂಕಿತ ಜಪಾನ್‌ನ ಆಟಗಾರ ನಿಶಿಕೋರಿ ಅವರು ಸ್ಪೇನ್‌ನ ರೋಬರ್ಟೋ ಬಟಿಸ್ಟ ಎದುರು 6-4, 7-6(7/3), 3-6, 6-3 ಅಂತರದಲ್ಲಿ ಸೋಲುಂಡರು. ಮಹಿಳೆಯರ ವಿಭಾಗದಲ್ಲಿ ಗಾರ್ಬಿನ್  ಮುಗುರುಝಾ ರೊಮೆನಿಯಾದ ಸೊರಾನ ಸಿರ್‌ಸ್ಟಿಯರನ್ನು 6-2, 6-2ರಿಂದ ಸುಲಭವಾಗಿ ಸೋಲಿಸಿ ನಾಲ್ಕನೆ ಸುತ್ತಿಗೆ ಪ್ರವೇಶಿಸಿದರು. ಮುಂದಿನ ಸುತ್ತಿನಲ್ಲಿ ಮುಗುರುಝ ಅಗ್ರಶೇಯಾಂಕಿತೆ ಏಂಜಲಿಕ್ ಕೆರ್ಬರ್ ಮತ್ತು ಅಮೆರಿಕದ ಶೆಲ್ಬಿ ರೋಜರ್ಸ್ ನಡುವಿನ ಪಂದ್ಯದ ವಿಜೇತರನ್ನು ಎದುರಿಸಲಿದ್ದಾರೆ. ಇನ್ನೊಂದು ಪಂದ್ಯದಲ್ಲಿ ಮಾಜಿ ಅಗ್ರಶ್ರೇಯಾಂಕಿತೆ ವಿಕ್ಟೋರಿಯಾ ಅಝರೆಂಕ ಇಂಗ್ಲೆಂಡಿನ ಹೀತರ್ ವಾಟ್ಸನ್ ಅವರನ್ನು 3-6, 6-1, 6-4 ರಿಂದ ಸೋಲಿಸಿ ಮುನ್ನಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News