ಕೆಎಸ್ಸಾರ್ಟಿಸಿಗೆ "ಇಂಡಿಯಾ ಬಸ್ ಅವಾರ್ಡ್"
Update: 2017-07-10 19:54 IST
ಬೆಂಗಳೂರು, ಜು. 10: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(ಕೆಎಸ್ಸಾರ್ಟಿಸಿ)ಗೆ ಜಾಣ ಸಾರಿಗೆ ವ್ಯವಸ್ಥೆ ಗೆ ಸತತ ಮೂರನೆ ಬಾರಿ ‘ಇಂಡಿಯಾ ಬಸ್ ಅವಾರ್ಡ್’ ಲಭಿಸಿದೆ.
ಜಾಣ ಸಾರಿಗೆ ವ್ಯವಸ್ಥೆ ದೇಶದ ಪ್ರಪ್ರಥಮ ಉಪಕ್ರಮವಾಗಿದ್ದು, ವಿಶ್ವಬ್ಯಾಂಕ್, ಕೇಂದ್ರದ ನಗರಾಭಿವೃದ್ಧಿ ಸಚಿವಾಲಯ, ರಾಜ್ಯ ಸರಕಾರದ ಜಂಟಿ ಆಶ್ರಯದಲ್ಲಿ ಕೆಎಸ್ಸಾರ್ಟಿಸಿ ಮೈಸೂರು ನಗರದಲ್ಲಿ ಈ ವ್ಯವಸ್ಥೆಯನ್ನು ಅಳವಡಿಸಿದೆ ಮತ್ತು ನಿಗಮದಲ್ಲಿ ಅನುಷ್ಠಾನಗೊಳಿಸಿರುವ ಪರಿಸರಸ್ನೇಹಿ ಉಪಕ್ರಮಗಳಿಗೆ ಪ್ರತಿಷ್ಟಿತ ಪ್ರಶಸ್ತಿ ಸಂದಿದೆ.
ಇತ್ತೀಚೆಗೆ ತೆಲಂಗಾಣ ರಾಜಧಾನಿ ಹೈದರಾಬಾದ್‌ನಲ್ಲಿ ನಡೆದ ಸಮಾರಂಭದಲ್ಲಿ ಉಪ ಮುಖ್ಯಮಂತ್ರಿ ಮುಹಮ್ಮದ್ ಅಲಿ 'India Bus Awards'ನ್ನು ಕೆಎಸ್ಸಾರ್ಟಿಸಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಸಂಸ್ಥೆಗೆ -2017' ಎರಡು ರಾಷ್ಟ್ರೀಯ ಪ್ರಶಸ್ತಿ ಬಂದಿವೆ. ಕೆಎಸ್ಸಾರ್ಟಿಸಿಗೆ ಲಭಿಸಿರುತ್ತಿರುವ 199 ಪ್ರಶಸ್ತಿ ಇದಾಗಿದೆ ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.