×
Ad

ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ರೈ "ಷಂಡರು": ಬಿಜೆಪಿ ಶಾಸಕ ವಿಜಯಕುಮಾರ್‌ ವಿವಾದಾತ್ಮಕ ಹೇಳಿಕೆ

Update: 2017-07-12 18:42 IST

ಬೆಂಗಳೂರು, ಜು.12: ರಾಜ್ಯ ಸರಕಾರದ ವಿರುದ್ಧ ವಾಗ್ದಾಳಿ ನಡೆಸುವ ಭರದಲ್ಲಿ ಜಯನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಎಸ್.ವಿಜಯಕುಮಾರ್, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ದಕ್ಷಿಣ ಕನ್ನಡ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರನ್ನು ‘ಷಂಡ’ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.

ಬುಧವಾರ ನಗರದ ಆನಂದ್‌ರಾವ್ ವೃತ್ತದಲ್ಲಿ ಆರೆಸ್ಸೆಸ್ ಮುಖಂಡ ಶರತ್ ಸೇರಿ ಸಂಘ ಪರಿವಾರ ಮುಖಂಡರ ಕೊಲೆ, ಹಲ್ಲೆಯನ್ನು ಖಂಡಿಸಿ ರಾಜ್ಯ ಬಿಜೆಪಿ ನಡೆಸಿದ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡುವ ಭರಾಟೆಯಲ್ಲಿ ಶಾಸಕ ವಿಜಯ್‌ಕುಮಾರ್, ದಕ್ಷಿಣ ಕನ್ನಡದಲ್ಲಿ ಆರೆಸ್ಸೆಸ್ ಕಾರ್ಯಕರ್ತನ ಹತ್ಯೆಯಾಗಿದ್ದು, ಆರೋಪಿಗಳನ್ನು ಬಂಧಿಸಲು ಸರಕಾರಕ್ಕೆ ತಾಕತ್ತಿಲ್ಲ. ಇದೊಂದು ಷಂಡ ಸರಕಾರ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಶೋಭಾ ಕರಂದ್ಲಾಜೆ ಹೇಳಿದ್ದರು. ಆದರೆ, ಮಂಗಳವಾರ ಕಲಬುರಗಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ಬಿಜೆಪಿ ನಾಯಕರು, ಷಂಡರೋ, ಗಂಡಸರೋ ಗೊತ್ತಿಲ್ಲ. ನಾನು ಅಂತಹ ಭಾಷೆ ಬಳಸುವುದಿಲ್ಲ ಎಂದಿದ್ದಾರೆ. ಇದೀಗ ನಾನು ಹೇಳುತ್ತೇನೆ, ಈ ಸರಕಾರ ಅಯೋಗ್ಯ ಸರಕಾರ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಸ್ತುವಾರಿ ಸಚಿವ ರಮಾನಾಥ ರೈ "ಷಂಡರು" ಎಂದು ಏಕ ವಚನದಲ್ಲಿಯೇ ನಿಂದಿಸಿದರು.

ಚಪ್ಪಲಿಯಲ್ಲಿ ಹೊಡೆಯಬೇಕು: ಕಾಂಗ್ರೆಸ್ ನಾಯಕರು ಹಿಂದೂ ವಿರೋಧಿ ಚಟುವಟಿಕೆಗಳನ್ನು ಮಾಡುತ್ತಿದ್ದಾರೆ. ಇವರಿಗೆ ಚಪ್ಪಲಿ ತಗೊಂಡು ಹೊಡೆಯಬೇಕು ಎಂದು ಸಚಿವ ರಮಾನಾಥ ರೈ ಹಾಗೂ ಕಾಂಗ್ರೆಸ್ ನಾಯಕರ ವಿರುದ್ಧ ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News