‘ಅಲೆಮಾರಿ-ಬುಡಕಟ್ಟು’: ಜು.14ಕ್ಕೆ ವಿಚಾರ ಸಂಕಿರಣ
Update: 2017-07-12 18:47 IST
ಬೆಂಗಳೂರು, ಜು. 12: ಸಮಾಜದ ಕಟ್ಟಕಡೆಯ ತಳವರ್ಗಗಳ ಕಲೆ-ಸಂಸ್ಕೃತಿ ಹಾಗೂ ಮೌಖಿಕ ಸಾಹಿತ್ಯವನ್ನು ಮುಖ್ಯವಾಹಿನಿಗೆ ತರುವ ಹಾಗೂ ದಾಖಲಿಸುವ ನಿಟ್ಟಿನಲ್ಲಿ ಜು.14ರಂದು ನಗರದ ಮೈಸೂರು ಹೆಜ್ಜಾಲ ಸಮೀಪದ ದೊಡ್ಡೇರಿ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ರಾಜ್ಯಮಟ್ಟದ ವಿಚಾರ ಸಂಕಿರಣ ಏರ್ಪಡಿಸಲಾಗಿದೆ.
ಉದ್ಘಾಟನೆಯನ್ನು ಸಾಹಿತಿ ಡಾ.ಮೂಡ್ನಾಕೂಡು ಚಿನ್ನಸ್ವಾಮಿ ನೆರವೇರಿಸಲಿದ್ದು, ಅಧ್ಯಕ್ಷತೆಯನ್ನು ಅಲೆಮಾರಿ ಬುಡಕಟ್ಟು ಮಹಾಸಭಾದ ಅಧ್ಯಕ್ಷ ಡಾ.ಬಾಲ ಗುರುಮೂರ್ತಿ ವಹಿಸಲಿದ್ದು, ಚಲನಚಿತ್ರ ನಿರ್ದೇಶಕ ಹಾಗೂ ಲೇಖಕ ಯೋಗೇಶ್ ಮಾಸ್ಟರ್, ಸಾಹಿತ್ಯ ಅಕಾಡೆಮಿ ಸದಸ್ಯ ಪ್ರೊ.ವಡ್ಡಗೆರೆ ನಾಗರಾಜಯ್ಯ, ರಂಗತಜ್ಞ ಡಾ.ಎ.ಆರ್.ಗೋವಿಂದಸ್ವಾಮಿ ಪಾಲ್ಗೊಳ್ಳಲಿದ್ದಾರೆಂದು ಬಂಜಾರ ಸಾಮಾಜಿಕ ಮತ್ತು ಸಾಂಸ್ಕೃತಿಕ ಅಕಾಡೆಮಿ ಪ್ರಧಾನ ಕಾರ್ಯದರ್ಶಿ ಎನ್.ವರಲಕ್ಷ್ಮಿ ತಿಳಿಸಿದ್ದಾರೆ.