ವಿಚಾರಣೆಯಿಂದ ಹಿಂದೆ ಸರಿದ ನ್ಯಾ.ರತ್ನಕಲಾ
Update: 2017-07-12 20:23 IST
ಬೆಂಗಳೂರು, ಜು.12: ಹುಣಸೇಕಟ್ಟೆ ಅರಣ್ಯ ಪ್ರದೇಶ ಒತ್ತುವರಿ, ಮಗಳಿಗೆ ಕೆಎಚ್‌ಬಿ ನಿವೇಶನ ಹಂಚಿಕೆ ಸೇರಿ ಯಡಿಯೂರಪ್ಪ ವಿರುದ್ಧದ ಒಟ್ಟು ಮೂರು ಪ್ರಕರಣಗಳನ್ನು ರದ್ದುಪಡಿಸಿದ್ದ ಲೋಕಾಯುಕ್ತ ಕೋರ್ಟ್ ಆದೇಶ ರದ್ದು ಕೋರಿ ಖಾಸಗಿ ದೂರುದಾರ ಬಿ.ವಿನೋದ್ ಸಲ್ಲಿಸಿದ್ದ ಅರ್ಜಿ ವಿಚಾರಣೆಯಿಂದ ಹೈಕೋರ್ಟ್ ನ್ಯಾಯಮೂರ್ತಿ ರತ್ನಕಲಾ ಅವರು ಹಿಂದೆ ಸರಿದಿದ್ದಾರೆ.
ಖಾಸಗಿ ದೂರುದಾರ ಬಿ.ವಿನೋದ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ನ್ಯಾಯಮೂರ್ತಿ ರತ್ನಕಲಾ ಅವರು ಈ ಹಿಂದೆ ಯಡಿಯೂರಪ್ಪ ಅವರ ಪ್ರಕರಣಗಳನ್ನು ವಿಚಾರಣೆ ನಡೆಸಿದ್ದೇನೆ. ಹೀಗಾಗಿ, ಈ ವಿಚಾರಣೆಯಿಂದ ಹಿಂದೆ ಸರಿಯುತ್ತಿದ್ದೇನೆ ಎಂದು ತಿಳಿಸಿ ವಿಚಾರಣೆಯಿಂದ ಹಿಂದೆ ಸರಿದರು.