'ನನ್ನ ದೇಹ, ಮನಸ್ಸಿಗೆ ದೀರ್ಘ ವಿಶ್ರಾಂತಿ ಅಗತ್ಯವಿದೆ': ನೊವಾಕ್ ಜೊಕೊವಿಕ್

Update: 2017-07-13 18:46 GMT

ಲಂಡನ್, ಜು.13: ಮೊಣಕೈ ನೋವಿನಿಂದಾಗಿ ಥಾಮಸ್ ಬೆರ್ಡಿಕ್ ವಿರುದ್ಧದ ವಿಂಬಲ್ಡನ್ ಕ್ವಾರ್ಟರ್ ಫೈನಲ್ ಪಂದ್ಯವನ್ನು ಪೂರ್ಣ ಗೊಳಿಸಲಾಗದೇ ಗಾಯಗೊಂಡು ನಿವೃತ್ತಿಯಾಗಿದ್ದ ನೊವಾಕ್ ಜೊಕೊವಿಕ್ ದೇಹ ಹಾಗೂ ಮನಸ್ಸಿಗೆ ದೀರ್ಘ ವಿಶ್ರಾಂತಿ ಪಡೆಯುವ ಇಂಗಿತ ವ್ಯಕ್ತಪಡಿಸಿದ್ದಾರೆ.

12 ತಿಂಗಳಿಂದ ಗಾಯದ ಸಮಸ್ಯೆ ಎದುರಿಸುತ್ತಿರುವ ಜೊಕೊವಿಕ್‌ಗೆ ಬುಧವಾರ ನಡೆದ ವಿಂಬಲ್ಡನ್‌ನ ಕ್ವಾರ್ಟರ್‌ಫೈನಲ್ ಪಂದ್ಯ ಆಡುತ್ತಿದ್ದಾಗಲೇ ಮೊಣಕೈ ನೋವು ಕಾಣಿಸಿಕೊಂಡಿತು. ಹೀಗಾಗಿ ನಾಲ್ಕನೆ ಬಾರಿ ವಿಂಬಲ್ಡನ್ ಪ್ರಶಸ್ತಿ ಜಯಿಸುವ ಅವರ ಕನಸು ಈಡೇರಲಿಲ್ಲ.
 ನನಗೆ ಶಸ್ತ್ರಚಿಕಿತ್ಸೆಯಾಗುವ ಸಾಧ್ಯತೆಯಿದೆ. ಇದರಿಂದ ನನಗೆ ಒಳಿತಾಗುತ್ತದೆಂದು ಎನಿಸುತ್ತಿಲ್ಲ. ದೀರ್ಘಕಾಲದ ವಿಶ್ರಾಂತಿಯಿಂದ ಇದಕ್ಕೆ ಪರಿಹಾರ ಸಿಗಬಹುದು. ಗಾಯದ ಸಮಸ್ಯೆಯ ಜೊತೆಗೆ ಮನಶಾಂತಿಗಾಗಿ ದೀರ್ಘ ವಿಶ್ರಾಂತಿಯ ಅಗತ್ಯವಿದೆ ಎಂದು ಜೊಕೊವಿಕ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News