×
Ad

ಹಿಂಡಲಗಾ ಜೈಲಿಗೆ ಶೇಂಗಾದಲ್ಲಿ ಗಾಂಜಾ, ವಶ

Update: 2017-07-14 18:57 IST

ಬೆಂಗಳೂರು, ಜು.14: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಅವ್ಯವಹಾರ ನಡೆಯುತ್ತಿದೆ ಎಂಬ ಸುದ್ದಿಯ ಬೆನ್ನಲ್ಲೇ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ಒಂದು ಕೆಜಿಗೂ ಹೆಚ್ಚು ಗಾಂಜಾವನ್ನು ವಶಪಡಿಸಿಕೊಳ್ಳುವಲ್ಲಿ ಕಾರಾಗೃಹದ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.

ಶುಕ್ರವಾರ ಕೆಲವು ಆರೋಪಿಗಳು ಹಿಂಡಲಗಾ ಜೈಲಿಗೆ ಬಂಧಿತರನ್ನು ಕಾಣುವ ನೆಪದಲ್ಲಿ ಶೇಂಗಾದಲ್ಲಿ ಗಾಂಜಾವನ್ನು ತುಂಬಿಸಿ ತಂದಿದ್ದರು. ಈ ವೇಳೆ ಕಾರಾಗೃಹದ ಸಿಬ್ಬಂದಿ ಸಂದರ್ಶಕರನ್ನು ಪರೀಕ್ಷಿಸುವ ವೇಳೆ ಈ ಆರೋಪಿಗಳು ಸಿಕ್ಕಿ ಬಿದ್ದಿದ್ದಾರೆ.

ಸಂದರ್ಶಕರ ಸಾಲಿನಲ್ಲಿ ಸಾಮಾನ್ಯರಂತೆ ಸಾಗಿ ಬಂದ ಆರೋಪಿಗಳ ಕೈಯಲ್ಲಿ ಕಡಲೆಕಾಯಿಯಿತ್ತು. ಮೇಲ್ನೋಟಕ್ಕೆ ಕಡಲೆಕಾಯಿಯಂತೆ ಕಂಡರೂ ಕಾರಾಗೃಹದ ಸಿಬ್ಬಂದಿಗೆ ಅನುಮಾನ ಹುಟ್ಟಿಸುವಂತಿತ್ತು. ಹೀಗಾಗಿ ಕಡಲೆಕಾಯಿಯನ್ನು ಬಿಡಿಸಿ ನೋಡಿದಾಗ ಗಾಂಜಾವನ್ನು ತುಂಬಿಸಿಟ್ಟಿದ್ದು ಕಂಡುಬಂತು. ಕೂಡಲೆ ಆರೋಪಿಗಳನ್ನು ವಶಕ್ಕೆ ಪಡೆಯಲಾಯಿತು.

ಆರೋಪಿಗಳ ವಿಚಾರಣೆ: ಕಡಲೆಕಾಯಿಯಲ್ಲಿ ಗಾಂಜಾ ಪತ್ತೆಯಾದ ಕೂಡಲೆ ಹಿಂಡಲಗಾ ಜೈಲು ಅಧೀಕ್ಷಕ ಟಿ.ಪಿ.ಶೇಷ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News