×
Ad

ರಿಕ್ಷಾ ಚಾಲಕನ ಪುತ್ರಿಯ ವ್ಯಾಸಂಗಕ್ಕೆ ದೇವೇಗೌಡರ ನೆರವು

Update: 2017-07-14 20:15 IST

ಬೆಂಗಳೂರು, ಜು. 14: ಆಟೋರಿಕ್ಷಾ ಚಾಲಕನ ಪುತ್ರಿಯ ವಿದ್ಯಾಭ್ಯಾಸಕ್ಕೆ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಧನ ಸಹಾಯ ಮಾಡಿದ್ದು, ಇದೀಗ ಉನ್ನತ ವ್ಯಾಸಂಗಕ್ಕೂ ಆರ್ಥಿಕ ನೆರವು ನೀಡಿದ್ದಾರೆ.

ಇಲ್ಲಿನ ರಾಜಾಜಿನಗರದ ಕೆ.ಎಲ್.ಇ ಕಾಲೇಜಿನಲ್ಲಿ ತೃತೀಯ ಬಿಕಾಂ ವ್ಯಾಸಂಗ ಮಾಡುತ್ತಿರುವ ಶಿಲ್ಪಾಎಂಬ ವಿದ್ಯಾರ್ಥಿನಿ ಆಟೋ ಚಾಲಕನ ಪುತ್ರಿ. ವಿದ್ಯಾರ್ಥಿನಿಯ ಕುಟುಂಬ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಹಿನ್ನೆಲೆಯಲ್ಲಿ ಎರಡು ವರ್ಷಗಳಿಂದಲೂ ಶಿಲ್ಪಾಳ ವಿದ್ಯಾಭ್ಯಾಸಕ್ಕೆ ದೇವೇಗೌಡ ನೆರವಿನ ಹಸ್ತ ಚಾಚಿದ್ದಾರೆ.

ಜೆಡಿಎಸ್ ಮುಖಂಡ ವಿ.ಕೆ.ಗೋಪಾಲ್, ಶಿಲ್ಪಾ ಅವರಿಗೆ 50 ಸಾವಿರ ರೂ.ಧನ ಸಹಾಯ ಮಾಡಿದರು. ಎಂಕಾಂ ಸೇರಿದಂತೆ ಯಾವುದೇ ಉನ್ನತ ವ್ಯಾಸಂಗಕ್ಕೆ ಶಿಲ್ಪಾ ಇಚ್ಛೆಪಟ್ಟರೂ ಸಹಾಯ ನೀಡಲಾಗುವುದು ಎಂದು ದೇವೇಗೌಡ ಇದೇ ವೇಳೆ ಆಭಯ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News