‘ಮಹಾಮಸ್ತಕಾಭಿಷೇಕ’ ರಾಜ್ಯ ಮಟ್ಟದ ಸಮಿತಿ ರಚನೆ
ಬೆಂಗಳೂರು, ಜು.14: ಶ್ರವಣಬೆಳಗೊಳದಲ್ಲಿ 2018ನೆ ಸಾಲಿನಲ್ಲಿ ಜರುಗಲಿರುವ ಮಹಾಮಸ್ತಕಾಭಿಷೇಕ ಮಹೋತ್ಸವದ ರಾಜ್ಯ ಮಟ್ಟದ ಸಮಿತಿಯಲ್ಲಿ ಕ್ಷೇತ್ರ ಹಾಗೂ ಸಮಾಜ ಪ್ರತಿನಿಧಿಗಳು ಪಟ್ಟಿಯ ಕ್ರಮ ಸಂಖ್ಯೆ (18) ರಲ್ಲಿ ಮೈಸೂರು ಜಿಲ್ಲೆಯ ಕೆ.ಆರ್.ತಾಲೂಕಿನ ಹಂಪಾಪುರದ ಎಚ್.ಪ್ರಭಾಕರ ಜೈನ್ ಅವರನ್ನು ಹೆಚ್ಚುವರಿ ಸದಸ್ಯರನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.
ಮಹಾಮಸ್ತಕಾಭಿಷೇಕ ಮಹೋತ್ಸವದ ರಾಜ್ಯ ಮಟ್ಟದ ಸಮಿತಿಯಲ್ಲಿ ಕ್ಷೇತ್ರದ ಹಾಗೂ ಸಮಾಜದ ಪ್ರತಿನಿಧಿಗಳು ಪಟ್ಟಿಯ ಕ್ರಮ ಸಂಖ್ಯೆ 19 ರಿಂದ ಹಾವೇರಿ ಜಿಲ್ಲೆಯ ಪ್ರಕಾಶ್ ಎಂ.ಜೈನ್, ಮೈಸೂರಿನ ಎಸ್.ಡಿ.ಓಂಕಾರ್ ಜೈನ್, ಕಲಬುರಗಿ ಜಿಲ್ಲೆಯ ಅಂಕುಶ ಬಿ.ಶಾಹ.
ದಕ್ಷಿಣ ಕನ್ನಡ ಜಿಲ್ಲೆಯ ಸುದರ್ಶನ ಜೈನ್, ತುಮಕೂರು ಜಿಲ್ಲೆಯ ಬಾಹುಬಲಿ ಹಾಗೂ ವೆಂಕಟೇಶ್ ಜೆ., ವಿಜಯಪುರ ಜಿಲ್ಲೆಯ ಅಜೀತ ಆದಿನಾಥ ಧನಶೆಟ್ಟಿ, ಚಿತ್ರದುರ್ಗ ಜಿಲ್ಲೆಯ ಇಳ್ಕಲ್ ವಿಜಯಕುಮಾರ್ ಹಾಗೂ ಎನ್.ಜೆ.ವೆಂಕಟೇಶ್, ಬೆಂಗಳೂರಿನ ಡಿ. ಸುರೇಶ್‌ಕುಮಾರ್, ಬೆಳಗಾವಿ ಜಿಲ್ಲೆಯ ಸುರೇಂದ್ರ ಚೂಡಾಮಣಿ ಸದಸ್ಯರಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.